Wednesday, January 5, 2011

ಗುಡ್ ನೈಟ್ ಕವನಗಳು

ಗುಡ್ ನೈಟ್ ಕವನ ೨ ....

‘ಪುಟ್ಟಿ ‘ ಎಂಬುದು

ಬರಿಯ ಹೆಸರಲ್ಲ ಎನಗೆ

‘ಪುಟ್ಟಿ ‘ ಎನ್ನ ಧ್ಯಾನ ಮಂತ್ರ

ಎನ್ನ ಪ್ರಾಣ ಮಂತ್ರ

ಎನ್ನ ಬಾಳ್ಗೆ ಒಲವು ತಂದ ಅಭಯನುಡಿ

ನೆಮ್ಮದಿಯ ಐತಂದ ಶಾಂತಿನುಡಿ

‘ಪುಟ್ಟೀ ಪುಟ್ಟೀ ‘ಎನುವುದು ಬರಿಯ ಹೆಸರಲ್ಲ

ಬರಿಯ ಹೆಸರಲ್ಲ ಅದು ,ಎನಗೆ ಎಲ್ಲಾ ..

ಗುಡ್ ನೈಟ್ ಕವನ ೩ .........

ಕಪ್ಪು ರಾಚಿದ ರಾತ್ರಿಯಲಿ

ಭವ್ಯ ಕೋಲ್ಮಿಂಚೊಂದು ಮಿಂಚಿ

ಆ ಬೆಳ್ಳಿ ಮಿಂಚ ಮೈದುಂಬಿಕೊಂಡು

ರಾತ್ರಿ ಬೆಳಗುವುದು .

ಹಾಗೆ ಮಿಂಚಂತೆ ಬಂದವಳು ನೀನು

ನಿನ್ನೊಡನೆ ಬೆಳಗಿದ್ದು ನಾನು ...

8 comments:

ಶರಶ್ಚಂದ್ರ ಕಲ್ಮನೆ said...

ಎರಡನೇದು ಇಷ್ಟ ಆತು :)

ಸಾಗರದಾಚೆಯ ಇಂಚರ said...

nice good night kavana

ಸುಧೇಶ್ ಶೆಟ್ಟಿ said...

yeradaneyaddu super :)

ಗೌತಮ್ ಹೆಗಡೆ said...

@ ಶರಶ್ಚಂದ್ರ ಕಲ್ಮನೆ

ಥಾಂಕ್ಸಪ ಎರಡರಲ್ಲಿ ಒಂದನ್ನ ಇಷ್ಟಪತು ಒಂದು ಕಾಮೆಂಟ್ ಹಾಕಿದ್ದಕ್ಕೆ :)

ಗೌತಮ್ ಹೆಗಡೆ said...

@ ಗುರುಮೂರ್ತಿ ಹೆಗ್ಡೆ

ಧನ್ಯವಾದ ಮೆಚ್ಚಿ ಒಂದು ಪ್ರತಿಕ್ರಿಯೆ ತಿಳಿಸಿದ್ದಕ್ಕೆ :)

ಗೌತಮ್ ಹೆಗಡೆ said...

@ಸುಧೇಶ್ ಶೆಟ್ಟಿ


ಧನ್ಯವಾದ ಸುಧೇಶ್ ಅವರೆ ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ :)

ಆನಂದ said...

ಚೆನ್ನಾಗಿವ :)
ಮುಂದುವರೆಸಿ.

ಗೌತಮ್ ಹೆಗಡೆ said...

@ aanand


thank u sir :)