Tuesday, January 19, 2016

ಮುಂಗಾರ ಸೂರಡಿ

ಮತ್ತೆ ಬಂದಿದೆ ಮುಂಗಾರುಮಳೆ
ಈ ಸುರಿವ ಸೊಬಗ ಸೂರಡಿ
ಮನಸಾರೆ ನೀರಾಟ ಆಡಬೇಕಿದೆ
ಹಾಳೆ ದೋಣಿಮಾಡಿ
ಹರಿವ ನೀರಲಿ ತೇಲಿಬಿಡಬೇಕಿದೆ
ಸಾಗೋ ದೋಣಿ ಹಿಂದೆ ಓಡಿ ಓಡಿ
ಆಡೋ ಕಾಲವ ಹಿಂದೆ ಹಾಕಿ
ಕಳೆದ ನಿನ್ನೆಯ ಕಾಣಬೇಕಿದೆ

ನೀವೂ ಬರುವಿರೇನು ಎನ್ನೊಡನೆ?

ದೊಡ್ಡವರು ನಾವು ಜಗ ನಕ್ಕೀತು ಎಂಬ ಹಿಂಜರಿಕೆ ಯಾಕೆ?
ಈ ಹಾಳು ಹಿರಿತನ,
ಹಮ್ಮು ಬಿಮ್ಮು ಗತ್ತಿನ ನಡುವೆ
ನಮ್ಮ ನಡುವೆ ಸಹಜ ಸುಂದರ ಖುಷಿ
ಹಾಳಾಗಬೇಕೆ?
ಹಿರತನ ಬಂದರೆ ಬರಲಿ ಸಹಜವಾಗಿ
ಈ ಸುರಿವ ಮಳೆಯಂತೆ.
ಸುಮ್ಮನೆ ಮುಖವಾಡ ಯಾಕೆ?

ಇನ್ನೂ ತಡವೇಕೆ ಬಂದುಬಿಡಿ,
ಮಳೆ ನಿಲ್ಲುತಿದೆ...

6 comments:

ಶಿವಪ್ರಕಾಶ್ said...

ತುಂಬಾ ಚನ್ನಾಗಿದೆ ಗೌತಮ್.
ನನಗು ಕೂಡ ಮಳೆ ಅಂದ್ರೆ ತುಂಬಾ ಇಷ್ಟ..

ಶಾಂತಲಾ ಭಂಡಿ (ಸನ್ನಿಧಿ) said...

ಗೌತಮ...
ತುಂಬ ಇಷ್ಟವಾಯಿತು.
ಅದರಲ್ಲೂ
"ಸಾಗೋ ದೋಣಿ ಹಿಂದೆ ಓಡಿ ಓಡಿ
ಆಡೋ ಕಾಲವ ಹಿಂದೆ ಹಾಕಿ
ಕಳೆದ ನಿನ್ನೆಯ ಕಾಣಬೇಕಿದೆ" ಈ ಸಾಲುಗಳಂತೂ ಮತ್ತೂ ಇಷ್ಟವಾದವು.

ಸುಪ್ತದೀಪ್ತಿ suptadeepti said...

ಗೌತಮ್,
ಸೋರುವ ಸೂರಿನಡಿಯಲ್ಲಿ ಕಾಗದದ ದೋಣಿ ಮಾಡುವ ಮುಗ್ಧ ಮನದ ಆಟ, ನೋಟ ಇಷ್ಟವಾದವು. ಅದರಲ್ಲೂ ಕವನದ ಉತ್ತರಾರ್ಧ. ನಮ್ಮ ನಡುವಿನ ಹಿರಿತನದ ಗತ್ತು ಗೈರತ್ತು ಏನನ್ನೆಲ್ಲ ನಮ್ಮಿಂದ ಕಸಿದುಕೊಂಡಿದೆ ಎನ್ನುವ ಅರಿವಾಗುವಂತಿದೆ ಕವನ.
ಇನ್ನಷ್ಟು ಸಾಲುಗಳ ನಿರೀಕ್ಷೆಯಲ್ಲಿ,
ಜ್ಯೋತಿ.

ಗೌತಮ್ ಹೆಗಡೆ said...

thank u shiva prakaashjee.heege nimma blog bheti chaaltiyallirili.yaavaaga sikteera maleli neneyoke?

ಗೌತಮ್ ಹೆಗಡೆ said...

nanna bhaavakke neevu taala haakiddakke dhanyavaada JYOATIYAKKA.

@spn3187 ಕನ್ನಡಿಗ ಶಿವಕುಮಾರ ನೇಗಿಮನಿ said...

ಪ್ರಾರ್ಥನೆ 1/8
:cloud::cloud::cloud::cloud:
ಕಾರ್ಮೋಡಗಳೆ ಹಾಗೆ ಹೋಗುತ್ತಿದ್ದಿರಲ್ಲ,
ಧಯವಿಟ್ಟು
:earth_asia:
ಭೂಮಿಗೆ ಮುಂಗಾರು ಮಳೆ ಸುರಿಸಿ ಹೋಗಿ
https://t.me/spn3187 & https://spn3187.blogspot.com & go to google Search page "spn3187"