Friday, November 7, 2014

ಚುಟುಕುಗಳು ಒಂದಿಷ್ಟು :) :) :)...





ಬದಲಾಗುವುದೆಂದರೆ
ಗಿಡ ಹೋಗಿ ಮರ
ಹೊಳೆ ಹೋಗಿ ಕಡಲು
ಗೋಸುಂಬೆ ರೀತಿ
ಹಸಿರು ಹೋಗಿ ಹಳದಿಯಲ್ಲ ..
**********
ಕಳೆದಿರುಳು ಮಳೆ ಸುರಿದು ಹೋಯಿತು
ಮನದ ಸೂರು ಬಿಕ್ಕಳಿಸಿ
ತೊಟ್ಟಿಕ್ಕುತಿದೆ ಇನ್ನೂ ನಿನ್ನ ನೆನಪಾಗಿ .
ಮತ್ತೆ ಮೋಡಗಟ್ಟುತಿದೆ ಮೇಲೆ
ಬದುಕೋ ಆಸೆಯೇ ಆವಿಯಾಗಿ ...

*******
ಆತ ಗೆದ್ದ ರಾಜ್ಯದಿ
ನಾನೀಗ ಸೋತ ರಾಜ......
*********
ನೀ ಅಕಾಲ ಮಳೆಯಂತೆ .
ಬೇಕೆಂದಾಗ ಬಾರದವಳು .
ನೀನಾಗಿ ನೀನೇ ಬಂದ ಸಮಯದಿ
ಭರಿಸಲಾಗದವಳು.
**********
ಎಲ್ಲವೂ ತಣ್ಣಗಿರಲೆಂದುಕೊಂಡರೆ ಹೇಗೆ ಸಾಧ್ಯ?
ಆದಷ್ಟು ತಣ್ಣಗಿರುವುದು ಬದುಕ ಗುರಿ.
ಬಿಸಿಯೇ ಬದುಕ ಚಿಹ್ನೆ.
ಎಲ್ಲ ತಣ್ಣಗಾಗಿಹೋಯಿತೆಂದರೆ
ಅದು ಕೊನೆಯಲ್ಲಿ ಮಾತ್ರ...

1 comment:

ಮನಸಿನಮನೆಯವನು said...

ಎಲ್ಲ ಸಾಲುಗಳು ಚೆನ್ನಾಗಿವೆ.. ಬದುಕೋ ಆಸೆಯೇ ಆವಿಯಾಗಿ. ಆ ಬಿಸಿಯಾಗಿ ಹೋದ ಆವಿಯನ್ನೆಲ್ಲ ತಣ್ಣಗೆ ಮಾಡಿ ಮತ್ತೆ ಒಟ್ಟುಗೂಡಿಸಿ ಹರಿಸಬೇಕಿದೆ ಬೇರೊಂದು ಮನವು.