Monday, December 2, 2013

ನನ್ನ ತಿಜೋರಿಯಿಂದ ನಾನೇ ಚೋರಿ ಮಾಡಿದ ಸರಕು :) ;)

ಹೆಳೆಯದನ್ನ  ಕೆದಕಿ ಕೂರುವುದು ವಿರಾಮದ ಘಳಿಗೆಯಲ್ಲಿ ಹುಟ್ಟುವ ಬಿಡಲಾಗದ ಚಟ. ಚೂರು ಪಾರು ಒಳ್ಳೆಯದು ಸಿಕ್ಕರೆ ಪುಣ್ಯ. ಹಾಗೆ ಒಳ್ಳೆಯದು ಸಿಕ್ಕಾಗ ,ನನ್ನಲ್ಲೇ ಅರಳಿ  ಮಂದಹಾಸವಾಗಿ ಮೂಡಿ ಮತ್ತೆ ನನ್ನಲ್ಲೇ ಇಂಗಿ ಹೋಗುವ ಅಕಸ್ಮಾತ್  ಖುಷಿಯ ಪ್ರಾಪ್ತಿ . ಒಳ್ಳೆಯದು ಸಿಗದಿದ್ದರೆ ಬೇಜಾರಿಲ್ಲ . ಆ ಸಮಯಕ್ಕೆ ಕಾಲಹರಣವೇ ಮುಖ್ಯ . ಇಂಥಾ ಒಂದು ಕಾಲಹರಣದ ದಿವ್ಯ ಘಳಿಗೆಯಲ್ಲಿ ಸಿಕ್ಕ ಖುಷಿ ಇವತ್ತು ಇಲ್ಲಿ ತಂದು ಸುರಿಯುತ್ತಿರುವ ಮಕ್ಕಳ ಕವನಗಳು . :) :) ಹಳೇ  ಸರಕು ಆದ್ರೇನು ಭಾವ ನವನವೀನ ;) ;) ಹೊಸದಾಗಿ ಏನೂ ಸಿಗ್ದೆ ಇದ್ರೆ ಮಾಡೋದಾದ್ರೂ ಏನು ;) :)




ಮೋಡಕ್ ಮೋಡ ಢಿಕ್ಕಿಯಾಗಿ
ಗುಡುಗುಡು ಗುಮ್ಮ ಬಂದ .
ಫಳಫಳ ಮಿಂಚನು ತಂದ .
ಬರ ಬರ ಗಾಳಿಯ ಕೂಡಿ
ಸುರು ಸುರು ಮಳೆಯಾ  ತಂದ .



ತುಂಬಾ ಹಸಿವೆ ನನಗೆ

ಪುಟ್ಟಾ ಮಕ್ಕಳೆ ಬೇಕು ಎಂದ .
ನನ್ನಾ ಹಿಡಿಯಲು ಬಂದ
ನನ್ನಯ ಹಿಂದೆ ಅಪ್ಪನ ಕಂಡು
ಗುಮ್ಮ ಹೆದರಿ ಹೋದ
ಅಯ್ಯೋ ಪಾಪ ಗುಮ್ಮ
ಹೆದರಿ ಓಡಿಹೋದ .. 

..................................................  




ಅಪ್ಪ ಅಪ್ಪ ನಂದೊಂದ್ ಪ್ರಶ್ನೆ
ಉತ್ರ ಹೇಳಪ್ಪ.
ಕೇಳು ಮಗನೆ ಕೇಳು
 ಬೇಗ ಕೇಳಪ್ಪ.
 
ಅಪ್ಪ ನಿಂಗೆ ಉಂಟು ಮೀಸೆ
ಅಮ್ಮಂಗ್ ಯಾಕಿಲ್ಲ ?
ಅಜ್ಜಿ ತಲೇಲಿ ಉಂಟು ಕೂದ್ಲು
ಅಜ್ಜಂಗ್ ಯಾಕಿಲ್ಲ ?

ಪ್ರಶ್ನೆಗ್ ಉತ್ರ ಸಿಕ್ದೆ
ಬೆಪ್ಪನಾದ ಅಪ್ಪ .
ಅಯ್ಯೋ ಪಾಪ ಅಪ್ಪ
ಹಹ್ಹಹಹ್ಹಹ .
  .................................................. 


ತಲೆಗೆ ಟೋಪಿ
ಕೈಯಲಿ ಪೀಪಿ
ಮಿಠಾಯಿ ಮಾವಾ ಬಂದ
ಸಕ್ಕರೆ ಮಿಠಾಯಿ ತಂದ.
ಬನ್ನಿ ಮಕ್ಕಳೇ ಎಂದ .




ಒಂದೇ ರೂಪಾಯಿ
 ಎರಡು ಮಿಠಾಯಿ
ಎಷ್ಟು ಬೇಕು ಎಂದ
ತಂಗಿಯ ಅಕ್ಕನ
ತಮ್ಮನ ಅಣ್ಣನ
ಎಲ್ಲರ ಕರೆಯಿರಿ ಎಂದ.
ಬನ್ನಿ ಮಕ್ಕಳೇ ಬನ್ನಿ
                                                                   ತಿನ್ನಿರಿ ಎಲ್ಲರು ಎಂದ



No comments: