ಮನೆಯ
ಅಂಗಳದಾಚೆಯ ಗಟಾರಕ್ಕೆ
ಎಲೆ
ಅಡಿಕೆ ಉಗಿದು ಮುಂದೇನು ಎಂಬಂತೆ
ನಡು
ಮಧ್ಯಾಹ್ನದಲ್ಲಿ ಶೂನ್ಯವಾಯಿತು ಒಂದು ನೋಟ
ಏನೇನೋ
ಓದಿ ಹೆಮ್ಮೆ ತಂದ ಮಗ
ಅದೆಲ್ಲೋ
ಇದ್ದಾನೆ ದೂರ ದೇಶದಲ್ಲಿ
ಹೋಗುವಾಗ
ಕರೆದದ್ದು ಎದೆ ತುಂಬಾ ಕನಸಿನ
ಮೋಹನ
ಮುರಳಿ
ಮರಳಿ
ಬರಲಾಗದು ಈಗ
ಕರೆದ
ಮೋಹನ ಮುರಳಿ ಉರುಳಾಗಿದೆ
ಬದುಕು
ಪರದೇಶದಲ್ಲಿ ಬೇರು ಬಿಟ್ಟದ್ದು
ಗೊತ್ತಾಗಲೇ
ಇಲ್ಲ ನಿಧಾನ ವಿಷದಂತೆ
ಅತ್ತ
ಬೇರು ಬಿಟ್ಟ ಮರ
ಫಲಕ್ಕೆ ಬಂದ ಹೊತ್ತು
ಇತ್ತ
ಹಳೆಯ ಮರವೊಂದು ಉರುಳುವ ಹೊತ್ತು
ಉಭಯ
ಸಂಕಟ
ಅಲ್ಲೂ
ಮತ್ತೂ ಇಲ್ಲೂ
ಊರ
ತುಂಬಾ ಹೆಮ್ಮೆಯಿಂದ ಹೇಳಿಕೊಂಡ
ಮಗ
ಪರದೇಶ ಸೇರಿದ ಸಂಗತಿ ಈಗ
ಹಳಸಿ
ಹೋಗಿದೆ ಸರಿವ ಕಾಲದೊಡನೆ ಕಲಸಿ
ನಡುವೆ
ಏನೇನೋ ಆಗಿ ಹೋಗಿದೆ
ಬೆನ್ನು
ಬಾಗಿದೆ ಕಣ್ಣು ಮಂಜಾಗಿದೆ
ಕೇಳದ
ಕಿವಿ ಇದ್ದರೂ ಇರದಿದ್ದರೂ ಒಂದೇ
ಹೇಳಿ
ಕೇಳಲು ಮುಸ್ಸಂಜೆಯ ಗಾಢ ಮೌನ ಬಿಟ್ಟು
ಇನ್ನೇನೂ
ಇಲ್ಲ
ಅಪ್ಪ
ಅಮ್ಮನಿಗೆ ಮಗನುಂಟು
ಮಗನಿಗೆ
ಅವರುಂಟು
ಆದರೂ
ಯಾರಿಗೆ ಯಾರೂ ಇಲ್ಲ
ಮಗ
ಯಾಕಾಗಿ ಹೋದ ಎಂಬ ಯೋಚನೆ ಇಲ್ಲಿ
ಇಲ್ಲಿ
ಬಂದು ಏನೆಲ್ಲಾ ಮಾಡಿ ಏನು ಬಂತು
ಹೆತ್ತವರು
ಹೋದ ದಿನ
ತಾನು
ಬರಲೇ ಬೇಕು ಮಗನಾಗಿ ಮರಳಿ
ಸತ್ತು
ಎಷ್ಟು ದಿನವಾಗಿರುತ್ತೋ
ಹೋಗುವ
ಮುನ್ನ ಜೊತೆಗಿರಬೇಕಿತ್ತು
ಎಂಬ
ಪರದೇಸಿ ಭಾವ ಪರದೇಶದಲ್ಲಿ
ಬದಲಾದ
ಕಾಲ
ಇರಿಯುತಿದೆ ಒಳಗೊಳಗೇ
ಅಲ್ಲೂ
ಮತ್ತು ಇಲ್ಲೂ
5 comments:
Super One dude..,
ವಾಸ್ತವಿಕತೆಯನ್ನು ಬಹಳ ಚೆನ್ನಾಗಿ ವರ್ಣಿಸಿದ್ದೀರಿ.ತು೦ಬಾ ಚೆನ್ನಾಗಿದೆ..
Kindara jogi kathe nenaagutte......... mahileyaru, gandasaru, hadi hareyada hudugaru, hudugiyaru, makkalu- ellaru kindara jogiya hinde hoguttare..... ooralli ulidukolluvavaryaarendare mudukaru, mudukiyaru,kuntaru kurudaru.......... Malenaada halligalella haage aagtide taane...... bere deshakke hogi paradeshiyaagodu bidu.... tamma ooralle avaru paradesigalu!
superb...:)
ದಯವಿಟ್ಟು ನಿಮ್ಮ Email id ಕಳುಹಿಸಿರಿ .ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಪರವಾಗಿ ನಿಮಗೆ email ಕಳುಹಿಸುತ್ತೇನೆ- ಮುರಳೀಧರ ಉಪಾಧ್ಯ ಹಿರಿಯಡಕ
mhupadhya@gmail.com
Blog-http://mupadhyahiri.blogspot.in
Post a Comment