ಮಂಗಳೂರು ಮಲ್ಲಿಗೆಗೆ ಮೈಸೂರು ಮಲ್ಲಿಗೆ ಕಸಿ
ಎಂತಕೆನ ಗೊತ್ತಿಲ್ಲೆ
ಕೊಟ್ಟಿಗೇಲಿ ,
ಬ್ಯಾಣದಲ್ಲಿ
ಗದ್ದೇಲಿ ತ್ವಾಟದಲ್ಲಿ
ಎಲ್ಲ್ ಹೋದ್ರು ನೀ ನೆನಪಾಗ್ತೆ
ಯಾವತ್ತೂ ಹಿಂಗೆಲ್ಲಾ ಆಗಿತ್ತಿಲ್ಲೆ
ಇಲ್ಲಿತಂಕ
ಎಂತಕ್ಕೋ ಗೊತ್ತಿಲ್ಲೆ
ಹಂಗೆ ಕೆರೆ ಏರಿ ಮೇಲೆ
ಸಂಜೆ ಹೊತ್ತಿಗೆ ಸುಖಾಸುಮ್ನೆ ಹೋಗನ ಕಾಣ್ತು
ಕೆರೆ ತುಂಬ ಈಗ ಅಂತರಗಂಗೆ ಬೆಳದ್ದು
ಕೆರೆಲೀಗ ನೀರೇ ಇಲ್ಲೆ
ಅಥ್ವಾ ಎಂಗೆ ಕಾಣ್ಸ್ತಿಲ್ಲೇ ಅನ್ಸ್ತು
ಆದ್ರೂ ಕೆರಿಗೆ ಕಲ್ಲು ಹೊಡದು
ಅಲೆಯೇನಾದ್ರು ಯೋಳ್ತಾ ಹೇಳಿ
ಕಾಯ್ತಾ ಕೂರನ ಕಾಣ್ತು
ಅಂತರಗಂಗೆಯೊಳಗೆ ಕೆಳಗೆ ಅಲೆ ಎದ್ರೂ
ಎದ್ದಿಕ್ಕು
ತಾವರೆ ಹೂವು ಇದ್ರೂ ಇದ್ದಿಕ್ಕೂ ಹೇಳೂ
ಅನ್ಸ್ತ್
ಸಿರಿಗೆರೆಯ ನೀರಿನಲಿ ಬಿರಿದ
ತಾವರೆಯಲ್ಲಿ ಹೇಳಿ
ನರಸಿಂಹಸ್ವಾಮಿ ಪದ್ಯ ನೆನಪಾಗ್ತು
ಸಂತಿಗೆ ಅನಂತಸ್ವಾಮಿ ಹಾಡೂ
ಬಾಯಿ ಬಿಡದೆ ಮನ್ಸಲ್ಲೇ
ಪ್ರತಿಸಲ ಹಾಡನ ಅನ್ಸ್ತು
ಅಜ್ಜನ ಮನೆಯಿಂದ ಅಮ್ಮ
ತಂದು ನೆಟ್ಟಿದ್ದ ಮಂಗಳೂರು ಮಲ್ಲಿಗೆ
ಬಳ್ಳಿ ತುಂಬ ಈಗ ಹೂವಾಜು
ನೀನು ಈಗ ಇಲ್ಲಿದ್ದಿದ್ರೆ
ನಿನ್ನ ಊರುದ್ದ ಜಡೆಗೆ ಮಾರುದ್ದ ದಂಡೆ
ಮಾಡ್ಕಂಡು
ಖುಷಿಪಡ್ತಿದ್ದೆ ಅನ್ಸ್ತು
ಅಪ್ಪ ತಂದಿಟ್ಟಿದ್ದು
ಹಳೇ ಮೈಸೂರು ಮಲ್ಲಿಗೆ ಕ್ಯಾಸೆಟ್ಟು
ಪದೇ ಪದೇ ಕೇಳನ ಕಾಣ್ತು
ಮಂಗಳೂರು ಮಲ್ಲಿಗೆಗೆ ಮೈಸೂರು ಮಲ್ಲಿಗೆ
ಕಸಿ
ಹಳೇ ಕ್ಯಾಸೆಟ್ಟಿಗೆ ಹೊಸಾ ಟೇಪ್ ರೆಕಾಡರ್ರು
ಮಲ್ಗೆ ಮೂಗ್ಗು ಅರಳಿ ಹಾಡಾಗ್ತಾ ಇದ್ದು
ಹಾಡಿನಲ್ಲಿ ಎಂಥದೋ ಪರಿಮಳ
ಎಂತದು ಹೇಳಿ ಗೊತಾಗ್ತಾ ಇಲ್ಲೆ
ಒಟ್ನಲ್ಲಿ ಏನೇನೋ ಆಗ್ತಾ ಇದ್ದು
ಅಲೆಯಿಡುವ ಮುತ್ತಿನಲೆ ಕಾಣುವುದು
ನಿನ್ನೊಲುಮೆ
ಒಳಗುಡಿಯ ಮೂರ್ತಿ ಮಹಿಮೆ
ರಿವೈಂಡ್ ಮಾಡಿ ಮಾಡಿ ಕೇಳ್ತಾ ಕೂತ್ರೆ
ಈ ಹಾಡು ಥೇಟ್ ನಿನ್ನಂಗೆಯಾ ಅನ್ಸ್ತು
ಅರ್ಥ ಮಾಡ್ಕಳಕ್ಕೆ ಹೊರಟ್ರೆ ಅರ್ಥ
ಆಗಲ್ಲೆ
ಸುಮ್ಮನೆ ಕೇಳ್ತಾ ಕೂತ್ರೆ ಖುಷಿಗೆ
ಲಿಮಿಟ್ಟೆ ಇಲ್ಲೆ.
ಜಾಸ್ತಿ ಎಂತ ಹೇಳದು
ಈಗೀಗ ಬರಿ ನೀನೇ ನೀನು
ಉಳಿದಿದ್ದೆಲ್ಲ
ಹಾಳು ಮೂಳು
ಮಣ್ಣು ಮಸಿ
ಒಣ ಶುಂಟಿ ಅಷ್ಟೇ.
No comments:
Post a Comment