ಇಂದಿನ ರವಿ ಎಂದಿನಂತಿಲ್ಲ
ಉಡುಗುತಿದೆ ಬೆಳಗುವ ತ್ರಾಣ
ಅಳಿಯುತಿದೆ ಬೆಳಕಿನ ಬಣ್ಣ
ಅಪರಾಹ್ನ ಅಡಿಯಿಡುವ ಹೊತ್ತಿಗೆ ಅಕಾಲ ಸಂಜೆ
ರಾತ್ರಿ ದೂರಿಲ್ಲ
ಹಗಲಿಲ್ಲದ ಮೇಲೆ ರವಿಯೂ ಇಲ್ಲ
ರವಿ ಅರಳಿಸಿದ ಆ ಹೂವು
ರವಿ ಕಾಣಿಸಿದ ಹೂವ ಬಣ್ಣದ ಬೆರಗು
ಅರಳಿದ್ದು ಮುದುಡಿಹೋಯಿತು
ಕಂಡಿದ್ದು ಎಲ್ಲಿ ಕಾಣೆಯಾಯಿತೋ?
ಕತ್ತಲಲ್ಲಿ ಕಣ್ಣಿದ್ದೂ ಕುರುಡು
ಅಗೋ ಅಲ್ಲಿ
ರವಿಯಿರದ ಸಂಧಿಯಲಿ ಹಾಳು ಅವಕಾಶವಾದಿ ಚಂದ್ರ
ಹೊಳಪಾಗಿ ಕಂಡರೂ ದಾರಿ ತೋರಲಾರ
ಕೆರಳಿಸುವ ಕಲೆ ಗೊತ್ತು.ಅರಳಿಸುವ ಸಿದ್ಧಿ ಒಲಿದಿಲ್ಲ.
ಹಚ್ಚಬೇಕಿದೆ ದೀಪ ಕನಸ ಕಡ್ಡಿಯ ಗೀರಿ
ನಾಳೆಯ ಹಗಲು ಈಗಲೇ ಬೆಳಕಾಗಲಿ
ಎಂದಿನಂತಿಲ್ಲದ ರವಿ ನಾಳೆ ಏನಾಗುವನೋ
ರವಿ ಬಂದರೂ ಬರಬಹುದು ನಾಳೆ
ಖಾತ್ರಿಯಿಲ್ಲ .
8 comments:
ಕವನ ಸೊಗಸಾಗಿದೆ.
ರವಿ ಬಂದಾನು, ಬಹುಶಃ :)
sogasaagidhe kavana... odhisikondu hoyithu :)
@ಸುಬ್ರಮಣ್ಯ ಮಾಚಿಕೊಪ್ಪ
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ :)
ಹೊಸವರ್ಷದ ಶುಭಾಶಯಗಳು :)
@ ಆನಂದ
ಹ್ಮಂ ಹೌದು.ಖಾತರಿ ಇಲ್ಲ.:)ಬಂದರೂ ಬರಬಹುದು.ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು.:)
ಧನ್ಯವಾದ ಹಾಗು ಹೊಸವರುಷದ ಶುಭಾಶಯಗಳು :)
@ ಸುಧೇಶ್ ಶೆಟ್ಟಿ
ಸುಧೇಶ್ ಜಿ ಧನ್ಯವಾದ ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ :)
ಹೊಸವರುಷದ ಶುಭಾಶಯಗಳು :)
wow superb !!!
ಹೊಳಪಾಗಿ ಕಂಡರೂ ದಾರಿ ತೋರಲಾರ
ಕೆರಳಿಸುವ ಕಲೆ ಗೊತ್ತು.ಅರಳಿಸುವ ಸಿದ್ಧಿ ಒಲಿದಿಲ್ಲ.
Wow...!!! Super..
ಹೊಳಪಾಗಿ ಕಂಡರೂ ದಾರಿ ತೋರಲಾರ
ಕೆರಳಿಸುವ ಕಲೆ ಗೊತ್ತು.ಅರಳಿಸುವ ಸಿದ್ಧಿ ಒಲಿದಿಲ್ಲ.
Wow...!!! Super..
Post a Comment