ಪೋಲಿ ಚಿತ್ರಗಳು, ಪೋಲಿ ಪುಸ್ತಕಗಳು, ಪೋಲಿ ಮೆಸ್ಸೇಜುಗಳು.ಇವರೆಲ್ಲ ನಿಜಕ್ಕೂ ನತದೃಷ್ಟರು ..ನಾವು ಇವುಗಳ ಸಮ್ಮುಖದಲ್ಲಿ ಎಲ್ಲದರಕ್ಕಿಂತ ಹೆಚ್ಚು ಖುಷಿಯಿಂದ ,ತನ್ಮಯತೆಯಿಂದ ತಲ್ಲೀನರಾಗುತ್ತೇವೆ .ಎಲ್ಲಿಯೂ ಸಿಕ್ಕದ ಧ್ಯಾನಸ್ಥ ಸ್ಥಿತಿಯನ್ನು ನಾವಿಲ್ಲಿ ಕಂಡುಕೊಳ್ಳುತ್ತೇವೆ ..ಆದರೂ ಇವು ಎಂದಿಗೂ ನಮ್ಮ ಸ್ಟೇಟಸ್ ಬಾರಿನಲ್ಲಿ ಜಾಗ ಪಡೆದುಕೊಳ್ಳುವುದಿಲ್ಲ .ನಮ್ಮ ಲೈಕ್ ಲಿಸ್ಟಿನಲ್ಲಿ ,ಫೇವರಿಟ್ ಲಿಸ್ಟುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ .ಒಳಮನೆಯಲ್ಲೇ ಉಳಿದುಬಿಡುತ್ತವೆ ಮುಖವಾಡದ ಹೊಸ್ತಿಲು ದಾಟದೆ .ಅದು ಸರಿಯೇ ಬಿಡಿ.ಎಷ್ಟೆಂದರೂ ನಾವು ಸುಸಂಸ್ಕೃತ ಸಮಾಜದ ಶುದ್ಧ ಸಭ್ಯರು :) ;) ;)
..............................................
ಮಹಾ ಜ್ಞಾನಿ. ಚಿಂತಕ, ವಿಚಾರವಾದಿ, ಸಂವೇದನಾ ಶೀಲ ಬರಹಗಾರ, ಎಂದೆಲ್ಲ ಅವನಿಗೆ ಹೇಳಬಹುದಿತ್ತು. .ಮಹಾಕಾವ್ಯ ,ತತ್ವಶಾಸ್ತ್ರ, ಅದೂ ಇದೂ. ಅಕ್ಷರ ರೂಪದಲ್ಲಿರುವ ಎಲ್ಲವನ್ನೂ ಆತ ಓದಿಕೊಂಡಿದ್ದ.ಎಲ್ಲದರ ಬಗ್ಗೆ ವಿದ್ವತ್ಪೂರ್ಣವಾಗಿ ಹೇಳಬಲ್ಲವನು ,ಬರೆಯಬಲ್ಲವನು ಆಗಿದ್ದ .ಎಲ್ಲವನ್ನೂ ಒಂದು ಬಗೆಯ ಹೆಮ್ಮೆಯಲ್ಲೇ ಮಾಡಿಕೊಂಡಿದ್ದ .ಇಷ್ಟೆಲ್ಲಾ ವಿಚಾರಗಳನ್ನು ತಿಳಿದುಕೊಂಡಿದ್ದರೂ ಆತ ಸದಾ ಅಸುಖಿ. ಬದುಕನ್ನು ಚೆಂದಗೆ ಕಟ್ಟಿಕೊಳ್ಳುವಲ್ಲಿ ಸೋತ. ಯಾವ ಜ್ಞಾನವೂ ಅವನ ನೆರವಿಗೆ ಬರಲಿಲ್ಲ.
...................................................
..................................................
ಭಾರತಕ್ಕೆ ನಾಳೆ ಸ್ವಾತಂತ್ರ್ಯ ಸಿಕ್ಕ ದಿನ.ನನಗೆ ಅದನ್ನು ಕಳಕೊಂಡ ದಿನ ಎಂದ. ಯಾಕಪ್ಪ ಏನು ಸಮಾಚಾರ ಎಂದೆ.ನಾಳೆ ನನ್ನ Marriage Anniversary ಮಾರಾಯ ಎಂದು ನಕ್ಕ.. :) ;)
..................................................
ಸನ್ನಿ ಲಿಯೋನ್..ಇತ್ತೀಚಿಗೆ ನಾನು ಕೇಳಿದ ಹೆಸರು.. ಇವಳುತುಂಬ ಫೇಮಸ್ಸು .ಆದರೆ ನನಗೆ ಮಾತ್ರ ಗೊತ್ತಿಲ್ಲ...ಇಷ್ಟೊಂದು ದಡ್ಡ ಆಗಬಾರದು. ಸಾಮಾನ್ಯ ಜ್ಞಾನ ಬೆಳೆಸ್ಕೋಬೇಕು ಅಂತ ,ಅವಳು ಯಾರು ,ಏನು ಎತ್ತ ,ಏನವಳ ಸ್ಟೋರಿ ಕಥೆ ಎಂದು ಹುಡುಕಿಕೊಂಡು ಹೊರಟೆ ..ದೇವರೇ !!..ಬ್ರಹ್ಮಾಂಡವನ್ನೇ ಕಂಡೆ...ಮಹಾಮಹಿಮಳು ಅವಳು.ಪುಣ್ಯಾತಗಿತ್ತಿ .ಅದಕ್ಕೆ ದೊಡ್ಡವರು ಹೇಳಿದ್ದು ಕೆಲವಷ್ಟರ ಮೂಲ ಹುಡುಕಬಾರದು ಅಂತ ;) :) ;) ಸಣ್ಣವರು ನಾವು..ಹುಡುಕೋದೇ ನಮ್ ಬಿಸಿನೆಸ್ಸು ಅಂತ ಹೊರಟು ಎಲ್ಲೋಹೋಗಿ ವಾಪಸ್ಸು ಬರುವ ದಾರಿನೇ ಮರ್ತು ಬಿಡ್ತೀವಿ :) :) ಏನ್ ಮಾಡನ ಹೇಳಿ ?

ಎಲ್ಲ ಜ್ಞಾನವೂ ಅವನಿಗೆ ಹೆಮ್ಮೆಯಷ್ಟೇ ಆಗಿತ್ತು..ತಿಳಿದುಕೊಂಡ ಖುಷಿ ಎಂದಿಗೂ ಆಗಲಿಲ್ಲ ..ಎಲ್ಲವೂ ತಲೆಯಲ್ಲೇ ಉಳಿಯಿತು.ಹೃದಯಕ್ಕೆ ಇಳಿಯಲಿಲ್ಲ. ಆತ ಮಂಕುತಿಮ್ಮನ ಕಗ್ಗವನ್ನೂ ಓದಿದ್ದ .ಅದರ ಬಗ್ಗೆಯೇ ಒಂದು ವಿಮರ್ಶೆ ಕೂಡ ಬರೆದ. ‘ಎಲ್ಲರೊಳಗೊಂದಾಗು ಮಂಕುತಿಮ್ಮ ‘ ಎಂಬ ಕಗ್ಗದ ಸಾಲು ಆತನಿಗೆ ವಿಮರ್ಶೆಗೊಂದು ವಿಷಯವಾಯಿತು ಅಷ್ಟೇ. , ಬದುಕು ಕಟ್ಟಿಕೊಳ್ಳುವ ಸರಕಾಗಲಿಲ್ಲ :) :) ಯಾವುದೋ ಅರ್ಥವಾಗದ ಸಾಹಿತ್ಯಕ್ಕಿಂತ,ಒಣ ಚರ್ಚೆಗಿಂತ,ವಿಮರ್ಶೆಗಿಂತ ,ಅಮ್ಮ ಹಾಡುವ ಲಾಲಿ ,ಅಜ್ಜ ಹೇಳಿದ ಕಥೆ, ಅಪ್ಪ ಹಂಚಿಕೊಂಡ ಕಥೆವ್ಯಥೆ , ನಮ್ಮದೇ ಆದ ದಾರಿಯಲ್ಲಿ ನಮಗೆ ಸಿಕ್ಕ ಅನುಭವ ಇವುಗಳೇ ಮೇಲು :) :)
...................................................
ಕೆಲವಷ್ಟು ಸಂಗತಿಗಳು ಲೈಫಿನಲ್ಲಿ ಮೆಗಾ ಸೀರಿಯಲ್ ರೀತಿ. ಕಥೆ ಹಳ್ಳ ಹಿಡಿದು ಹೋಗಿರುತ್ತೆ .ಅಥವಾ ಅಸಲಿಗೆ ಕಥೆಯೇ ಇರುವುದಿಲ್ಲ. ಚಿತ್ರಕಥೆಯಲ್ಲೇ ನಿಭಾಯಿಸಿಕೊಂಡು ಹೋಗಬೇಕು .ಶುರುವಾದ ತಪ್ಪಿಗೆ ಸಾಗಬೇಕು. ನಿಲ್ಲಿಸಬಾರದು ಎಂಬ ಕಾರಣಕ್ಕೆ ನಡೆಸಿಕೊಂಡು ಹೋಗಬೇಕು :) :) ;)
..................................................
ಭಾರತಕ್ಕೆ ನಾಳೆ ಸ್ವಾತಂತ್ರ್ಯ ಸಿಕ್ಕ ದಿನ.ನನಗೆ ಅದನ್ನು ಕಳಕೊಂಡ ದಿನ ಎಂದ. ಯಾಕಪ್ಪ ಏನು ಸಮಾಚಾರ ಎಂದೆ.ನಾಳೆ ನನ್ನ Marriage Anniversary ಮಾರಾಯ ಎಂದು ನಕ್ಕ.. :) ;)
ಹಿಂದೊಮ್ಮೆ ಕೈಯಲ್ಲಿದ್ದ MBA ಬಿಟ್ಟು ಮಾಧ್ಯಮ ಕ್ಷೇತ್ರದಲ್ಲಿ ಕೆಲಸದ ಕನಸು ಕಂಡಿದ್ದೆ. ದಕ್ಕಲಿಲ್ಲ.ಹಣೆಯಲ್ಲಿ ಇದು ಬರೆದಿಲ್ಲ ಎಂದುಕೊಂಡು ನಿರಾಶನಾಗಿದ್ದೆ.ಈಗೀಗ ಮಾಧ್ಯಮ ಜಗತ್ತಿನ ವಿದ್ಯಮಾನಗಳನ್ನು ನೋಡುತ್ತಿದ್ದರೆ ನನ್ನ ಹಣೆಬರಹ ಸರಿಯಾಗಿಯೇ ಇತ್ತೆಂದು ಅನಿಸುತ್ತೆ. ವ್ಯಕ್ತಿಗತ ನಿಂದನೆ, ಸ್ವಪ್ರತಿಷ್ಠೆ ,ಮಿತಿ ಮೀರಿದ ರಾಜಕೀಯ. ಅಲ್ಲಿ ಏನುಂಟು ಏನಿಲ್ಲ. ‘ನಿನ್ನ ಕ್ರಿಯಾಶೀಲತೆ ವೃತ್ತಿಯಾಗುವುದು ಬೇಡ.ಪ್ರವೃತ್ತಿಯಾಗಿಯೇ ಇರಲಿ. ಆಗ ನೀನೂ ಉಳೀತಿ ,ನಿನ್ನ ಕ್ರಿಯಶೀಲತೆಯೂ ಉಳಿಯುತ್ತೆ.
ಈ ಮಾಧ್ಯಮದ ಸಹವಾಸ ನಮ್ಮ ಕಾಲಕ್ಕೇ ಆಗಿಹೋಗಲಿ .ನಿನಗಿದು ಬೇಡ.ಅವಕಾಶ ಹುಡುಕಿ ಹೋಗಬೇಡ .ಸಿಕ್ಕದ್ದನ್ನು ಬಿಡಬೇಡ ‘ಎನ್ನುವ ಅರ್ಥದಲ್ಲಿ ಹೇಳಿದ ಗುರುವಿನ ಮಾತು ಈಗಲೂ ಆಗಾಗ ನೆನಪಿಗೆ ಬರುತ್ತೆ. ಈಗ ಆಗೊಮ್ಮೆ ಈಗೊಮ್ಮೆ ತಲೆ ಕೆಟ್ಟು ಕೈ ತುರಿಸಿದರೆ ಎರಡು ಸಾಲು ಗೀಚಲು ಸ್ಟೇಟಸ್ ಬಾರ್ ಇದೆ. ತುರಿಕೆ ಜಾಸ್ತಿಯಾದರೆ ಯಥಾನುಶಕ್ತಿ ಕೆರೆದುಕೊಳ್ಳಲಿಕ್ಕೆ ನನ್ನದೇ ಆದ ಬ್ಲಾಗ್ ಅಂಗಳವಿದೆ.ಬದುಕಿನ ಬಗ್ಗೆ ಯಾವುದೇ ದೂರುಗಳಿಲ್ಲ.ನಾನು ಪರಮಸುಖಿ. ;) :)
...................................................
ಒಂದ್ ಕಾಲ್ ಕಾಲು ..ಎರಡ ಕಾಲ್ ಅರ್ಧ .ಮೂರಕ್ಕೆ ಮುಕ್ಕಾಲು ...ನಾಲ್ಕ್ ಕಾಲ್ ಒಂದೇ ..ಸಾಕು ಬಿಡು ..ನನಗೆ ಗೊತ್ತು ನೀನು ಪಕ್ಕಾ ಲೆಕ್ಕಾಚಾರದ ಮನುಷ್ಯ ಅಂತ .ಇದು ಲೆಕ್ಕದ ಸಮಯವಲ್ಲ .ಮಂಚಕ್ಕೆ ಮೂರೇ ಕಾಲು ಅಂದಳು ಮೆಲ್ಲಗೆ ನಕ್ಕು , ಬೆರಳಲ್ಲಿ ನೆಲವ ಗೀರಿ ಮಳ್ಳಿ. :) :) ಅಲ್ಲಿಗೆ ನನ್ನ ಲೆಕ್ಕ ತಪ್ಪಿತು. ನಾಲ್ಕ್ ಕಾಲ್ ಎರಡೂ ? ಮೂರೂ.. ? :) :) :
....................................................
ಸನ್ನಿ ಲಿಯೋನ್..ಇತ್ತೀಚಿಗೆ ನಾನು ಕೇಳಿದ ಹೆಸರು.. ಇವಳುತುಂಬ ಫೇಮಸ್ಸು .ಆದರೆ ನನಗೆ ಮಾತ್ರ ಗೊತ್ತಿಲ್ಲ...ಇಷ್ಟೊಂದು ದಡ್ಡ ಆಗಬಾರದು. ಸಾಮಾನ್ಯ ಜ್ಞಾನ ಬೆಳೆಸ್ಕೋಬೇಕು ಅಂತ ,ಅವಳು ಯಾರು ,ಏನು ಎತ್ತ ,ಏನವಳ ಸ್ಟೋರಿ ಕಥೆ ಎಂದು ಹುಡುಕಿಕೊಂಡು ಹೊರಟೆ ..ದೇವರೇ !!..ಬ್ರಹ್ಮಾಂಡವನ್ನೇ ಕಂಡೆ...ಮಹಾಮಹಿಮಳು ಅವಳು.ಪುಣ್ಯಾತಗಿತ್ತಿ .ಅದಕ್ಕೆ ದೊಡ್ಡವರು ಹೇಳಿದ್ದು ಕೆಲವಷ್ಟರ ಮೂಲ ಹುಡುಕಬಾರದು ಅಂತ ;) :) ;) ಸಣ್ಣವರು ನಾವು..ಹುಡುಕೋದೇ ನಮ್ ಬಿಸಿನೆಸ್ಸು ಅಂತ ಹೊರಟು ಎಲ್ಲೋಹೋಗಿ ವಾಪಸ್ಸು ಬರುವ ದಾರಿನೇ ಮರ್ತು ಬಿಡ್ತೀವಿ :) :) ಏನ್ ಮಾಡನ ಹೇಳಿ ?
......................................................
ಕೈಯಲ್ಲಿ ಪೆನ್ ಇದ್ದರೆ ಸಾಲದು.ತಲೆಯಲ್ಲಿ ಇಂಕ್ ಇರಬೇಕು :) :)
2 comments:
hha hha...idannellaa FACEBOOK nalli odidde....
ellavannu oTTige odidaaga sakkaat enisitu....
adarallU...Sunny bagge bareda riti super.....
ಕರೆಕ್ಟ! ಪಾರ್ಕರ ಪೆನ್ನಿದ್ದರೇನು, ಪಾರ್ಕರ ಇಂಕಿದ್ದರೇನು? ತಲೆಯೊಳಗೆ ವಿಚಾರಗಳು ಪಾರ್ಕ್ ಆಗಿರಬೇಕು, ಅಲ್ಲವೆ?
Post a Comment