ಅರ್ಥವಿರದ ಒಂದು ಪ್ಯಾರಾ .....
[ ಈಜೀವದ ತಂತಿಯಲಿ ನೀನು ನಾನು ಯಾಕಾಗಿ ಬದುಕು ಹೇಳು ಬೇಗ ಬಾ ಗೆಳತಿ ನಿನ್ನಯ ನಾನು ನಿನ್ನೊಳಗೆ ಯಾಕಾಗಿ ಏನಾಗಿ ಹೋದೆ ಹೇಳು ಬಾ ಬಾರೆ ಬೇಗ ಬಂದು ನನ್ನಯ ತೀರದ ದಾಹವ ತೀರಿಸು ನಿನ್ನೊಳು ಇಲ್ಲದ ನನ್ನೊಳು ಯಾಕೆ ಬಂದು ಹೀಗೆ ಕಾಡುವೆ ಸುಮ್ಮನೆ ಆ ಕಡೆ ತೀರದ ತೀರದ ದ್ಸಾಹ ಆಲೊಂದು ಖಾಲಿ ಮುಗಿಲು ಸುತ್ತ ಸುರಿಯುತಿದೆ ಬಿಸಿಲಿನ ಬೆವರು/ಯಾಕಾಗಿ ಬಂದೆ ನೀನಿ ಸುರಿವ ಮಳೆಯಾಗಿ.ಬೆವರೇ ಹಿತವಾಗಿತ್ತು.ಆಕಡೆ ಬೇರೊಂದು ಬಗೆಯ ಸೊಬಗು ಸೆಳೆಯುತಿದೆ ಎನ್ನ ಬಿಡದೆ ಕಾಡಿ ನೂರೊಂದು ನೆನಪುಗಳ ಹಾಗೆ ಬಿಟ್ಟು ಬಿಡುವೆನು ನಿನ್ನ ಹೀಗೆ ಬಂದು ಹೋದ ಬಯಕೆಯಂತೆ ಬೇಗ ಬಂದುಬಿಡು ಬಾ ಬೇಗಾ ಬಂದೆನ್ನ ತೀರಿಸು ಸಾಲ ನಿನ್ನ ಬೇಗ ಬಾರದೆ ಹೇಳು ಏತಕೆ ಈಗ ಹೀಗೆ ಬಂದಿಹೆ ತೋಚದೆ ಆದ ತಪ್ಪಿನಂತೆ ]
ಇಡಿಯಾಗಿ ಓದಿಕೊಂಡರೆ ಈ ಮೇಲಿನ ಸಾಲುಗಳಲ್ಲಿ ಅರ್ಥವೇ ಇಲ್ಲ. ವ್ಯಾಕರಣ ,ಕಾಗುಣಿತ ಇಲ್ಲಿ ಲೆಕ್ಕಕ್ಕೇ ಇಲ್ಲ. ಹುಡುಕಿ ಹೆಕ್ಕಿಕೊಂಡರೆ ನಾಲ್ಕಾರು ಹೊಳೆಯುವ ಪದಗಳ ಗುಚ್ಛ ಸಿಕ್ಕುತ್ತವೆ.ಅವುಗಳನ್ನು ಎತ್ತಿಕೊಂಡು ಪೋಣಿಸಿದರೆ ನಿಮ್ಮ ಗ್ರಹಿಕೆಗೂ ನಿಲುಕದ ಅಚ್ಚರಿಯ ಕವನವೋ ,ಇಲ್ಲವೇ ಬರಹದ ಒಂದು ಪ್ಯಾರಾವೋ ಸೃಷ್ಟಿಯಾಗುತ್ತೆ.
ಇದರ ಹಿಂದಿನ ಕಥೆಯಿಷ್ಟೇ.ಒಂದು ದಿನ ಖಾಲಿ ಕುಳಿತ ಸಮಯದಲ್ಲಿ ಸುಮ್ಮನೆ ಕೀ ಬೋರ್ಡ್ ಮೇಲೆ ಬೆರಳಾಡಿಸುತ್ತ ಏನೇನೋ ಟೈಪ್ ಮಾಡುತ್ತಾ ಹೋದೆ. ಹೀಗೆ ಟೈಪ್ ಮಾಡಿದ್ದನ್ನು ಒಮ್ಮೆ ಓದಿದಾಗ ಕೆಲವು ಖುಷಿ ಕೊಡುವ ಸಾಲುಗಳು ನನಗೆ ಸಿಕ್ಕವು. ನೀವೂ ಇದನ್ನು ಪ್ರಯತ್ನಿಸಿ.ನಿಮಗೆ ಯಾವುದೋ ಒಂದು ವಿಷಯ ಕಾಡುತ್ತಿರಬಹುದು ಅಥವಾ ಕಾಡದೆಯೂ ಇರಬಹುದು.ಇಲ್ಲಿ ವಿಷಯ ಇದ್ದರೂ ಆದೀತು. ಇಲ್ಲದಿದ್ದರೂ ಆದೀತು. ಆದರೆ ಟೈಪ್ ಮಾಡಲು ಶುರು ಮಾಡಿದ ಮೇಲೆ ಯೋಚಿಸಬೇಡಿ.ನಡುವೆ ಎಲ್ಲೂ ನಿಲ್ಲಿಸಬೇಡಿ.ಸುಮ್ಮನೆ ಸ್ವಲ್ಪ ಹೊತ್ತು ಬೆರಳು ಓಡಿದಂತೆ ಟೈಪ್ ಮಾಡುತ್ತಾ ಹೋಗಿ. ಕೊನೆಗೊಮ್ಮೆ ನೀವು ಟೈಪ್ ಮಾಡಿದ್ದನ್ನು ಓದುತ್ತಾ ಬನ್ನಿ. ನಿಮಗೆ ಕೆಲವು ಅಪರೂಪದ ಸಾಲುಗಳು ಸಿಕ್ಕುತ್ತವೆ.
ಉದಾಹರಣೆಗೆ ನಾನು ಈ ಅರ್ಥವಿರದೇ ಟೈಪ್ ಮಾಡಿದ ಪ್ಯಾರದಲ್ಲಿ ಹೆಕ್ಕಿಕೊಂಡ ಕೆಲವು ಸಾಲುಗಳನ್ನು ನಿಮ್ಮೆದುರು ಇಡುತ್ತೇನೆ .ನೋಡಿ.
ಆ ಕಡೆ ತೀರದ ತೀರದ ದಾಹ
ಅಲ್ಲೊಂದು ಖಾಲಿ ಮುಗಿಲು
ಸುತ್ತ ಸುರಿಯುತಿದೆ ಬಿಸಿಲಿನ ಬೆವರು
ಯಾಕಾಗಿ ಬಂದೆ ನೀನು ಸುರಿವ ಮಳೆಯಾಗಿ
ಬೆವರೇ ಹಿತವಾಗಿತ್ತು
ಆ ಕಡೆ ಬೇರೊಂದು ಬಗೆಯ ಸೊಬಗು
ಸೆಳೆಯುತಿದೆ ಎನ್ನ ಬಿಡದೆ ಕಾಡಿ ನೂರೊಂದು ನೆನಪುಗಳ ಹಾಗೆ
ಬಿಟ್ಟು ಬಿಡುವೆನು ನಿನ್ನ
ಹೀಗೆ ಬಂದು ಹೋದ ಬಯಕೆಯಂತೆ
ಇವಿಷ್ಟು ಬಿಡಿಬಿಡಿಯಾಗಿ ಹೆಕ್ಕಿಕೊಂಡ ಪದಗಳಾದರೂ ಓದುವಾಗ ಎಲ್ಲವೂ ಸೇರಿ ಒಂದು ಪುಟ್ಟ ಕವನದಂತೆ ಕಾಣುತ್ತೆ .ಹೀಗೆ ಸಿಕ್ಕ ಸಾಲುಗಳನ್ನು ಇದ್ದ ಹಾಗೆಯೇ ಇಟ್ಟುಕೊಳ್ಳಬಹುದು .ಅಥವಾ ಸ್ವಲ್ಪ ಪಾಲಿಶ್ ಮಾಡಿ ಇನ್ನೆಲ್ಲೋ ಬಳಸಿಕೊಳ್ಳಬಹುದು.ಸಿಕ್ಕ ಎಲ್ಲವನ್ನೂ ಒಟ್ಟಾಗಿ ಬಳಸಿಕೊಳ್ಳಬಹುದು .ಅಥವಾ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ವಿಭಿನ್ನ ಸಂದರ್ಭಗಳಲ್ಲಿ ಬಳಸಬಹುದು .
ಕಸವೋ ರಸವೋ ಎಂಬ ಗೊಂದಲದಲ್ಲಿ ಒಂದಿಷ್ಟು ...
ಇನ್ನೂ ಕೆಲವಷ್ಟು ಸಾಲುಗಳನ್ನು ಹೆಕ್ಕಿ ಕೊಂಡಿದ್ದೇನೆ. ಇವುಗಳಿಗೆ ಅರ್ಥವೇನೆಂದು ನನಗೂ ಗೊತ್ತಿಲ್ಲ.ಅರ್ಥ ಸಿಕ್ಕರೆ ನಿಮ್ಮ ಪುಣ್ಯ.ಅವು ಹೀಗಿವೆ.
‘ನಿನ್ನೊಳು ಇಲ್ಲದ ನನ್ನೊಳು ಯಾಕೆ ಬಂದು ಹೀಗೆ ಕಾಡುವೆ ಸುಮ್ಮನೆ ‘
‘ನಿನ್ನಯ ನಾನು ನಿನ್ನೊಳಗೆ ಯಾಕಾಗಿ ಏನಾಗಿ ಹೋದೆ ಹೇಳು’
‘ಈಗ ಹೀಗೆ ಬಂದಿಹೆ ತೋಚದೆ ಆದ ತಪ್ಪಿನಂತೆ’
ಈಗೀಗ ನನ್ನ ಏಕಾಂತಕ್ಕೆ ,ಖಾಲಿ ಕುಳಿತ ಕ್ಷಣಗಳಿಗೆ ಹೀಗೆ ಹುಚ್ಚುಚ್ಚಾಗಿ ಟೈಪ್ ಮಾಡುವುದು , ನಂತರ ಈ ಕಸದಲ್ಲಿ ರಸ ಹುಡುಕುವುದು ಹವ್ಯಾಸವಾಗಿಹೋಗಿದೆ. ನೀವೂ ಪ್ರಯತ್ನಿಸಿ ಒಮ್ಮೆ :) :) .
10 comments:
ಇದು 'ನವ್ಯದ' ಹುಟ್ಟೇ? ಜಯಂತರ ಇತ್ತೀಚಿನ ಕಾವ್ಯಗಳಲ್ಲಿ ಇದೇ ರೀತಿಯ ಸಾಕಷ್ಟು ಪದ ಪುಂಜಗಳು ಕಾಣಸಿಗುತ್ತವೆ.ನಿಮ್ಮ ಹೊಸ ರೀತಿಯ ಕಾವ್ಯಕೃಷಿಯನ್ನು ಮುಂದುವರೆಸಿ.ಹೊಸ ರೀತಿಯ ಕಾವ್ಯಗಳಿಗೆ ಅದು ನಾಂದಿಯಾಗಲಿ.ನಮಸ್ಕಾರ.
ಗೌತಮ್ಮಯ್ಯ,
ಯಾವುದೋ ಲಹರಿಯಲ್ಲಿ ತೇಲಿ ಹೋದವಗೆ ಹೀಗೇ ಹಲಕೆಲವು ಹೊಳೆವ ಮಣಿಗಳು ಸಿಗೋದು ಅಪರೂಪವೇನಲ್ಲ, ಅವನ್ನು ಗುರುತಿಸಿ ಹೆಕ್ಕಿಕೊಂಡ ನೀನು ಬುದ್ಧಿವಂತ ಖಂಡಿತ. ನಿನ್ನೀ ಹುಚ್ಚುತನ ಹೆಚ್ಚಾಗಲಿ, ಮೆಚ್ಚಾಗಲಿ.
Use dasher software ... That can be used for kannada also ... Left it itself It will generate such content !!!
Down load link is available in the end of
http://en.wikipedia.org/wiki/Dasher
goutam,
inthaha padagaLa guccha sulabhakke hoLeyalla ... nimage hoLedide... nimma sahitya bhete munduvariyali...
"ಅರ್ಥವಿರದ ಒಂದು ಪ್ಯಾರಾ ....." ದಲ್ಲಿ ತುಂಬಾ ಅರ್ಥಗಳಿವೆ . ಹಾಗೆ ಕೆಲವೊಂದು ತಪ್ಪುಗಳಿವೆ ವಿರಹದ ವೇದನೆ ಈ ಪ್ಯಾರದಲ್ಲಿ ಎದ್ದು ಕಾಣುತ್ತಿದೆ ಚನ್ನಾಗಿದೆ ನಿಮ್ಮ ಬರವಣಿಗೆ KEEP WRITING ...
ಬನ್ನಿ ನನ್ನವಳಲೋಕಕ್ಕೆ ಒಮ್ಮೆ .......
SATISH N GOWDA
@ ಕೃಷ್ಣ ಮೂರ್ತಿ ಸರ್
ಕಾವ್ಯ ಸೃಷ್ಟಿ ಅಂತೇನಿಲ್ಲ ಸರ್.ಸುಮ್ನೆ ಒಂದು ಟೈಮ್ ಪಾಸು ತಲೆಹರಟೆ ಅಷ್ಟೇ :) ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ ಸರ್ :)
@ಜ್ಯೋತಕ್ಕ
ಥ್ಯಾಂಕ್ಸ್ ಅಕ್ಕಯ್ಯ :) ಹುಚ್ಚು ಹೆಚ್ಚಾಗೊದೇನು.ವಿಪರೀತವಾಗೆ ಇದೇ :)ಥ್ಯಾಂಕ್ಸ್ ಅಕ್ಕಯ್ಯ :)
@ ಕಲ್ಲು ಸಕ್ರಿ
ಧನ್ಯವಾದ ಸರ್ ನಿಮ್ಮ ಪ್ರತಿಕ್ರಿಯೆಗೆ ಹಾಗು ಸಲಹೆಗೆ :)
@ ದಿನಕರ್ ಸರ್
ಥ್ಯಾಂಕ್ಸ್ ಸರ್ ನಿಮ್ಮ ಹಾರೈಕೆಗೆ .ಎಲ್ಲರಿಗೂ ಹೊಳೆಯುತ್ತೆ ಸರ್.ನನಗೆ ಅಂತ ಏನು ವಿಶೇಷ ಇಲ್ಲ .:)
@ ಸತೀಶ್ ಗೌಡ
ತಪ್ಪಿದೆ ಅಂದಿದ್ದೀರಿ. ನಾನೇ ಹೇಳಿದ್ದೇನೆ ಪೋಸ್ಟ್ ನಲ್ಲಿ ತಪ್ಪಿದೆ ಎಂದು.ಅದು ತಪ್ಪು ತಪ್ಪಾಗಿ ಸುಮ್ಮನೆ ಬರೆಯುತ್ತ ಹೋದದ್ದು :)
ಧನ್ಯವಾದ ಸರ್ :)
Post a Comment