ಕಾಳನಿಶಿ ನಶೆಯ ಹಬ್ಬಿಸಿ ಬಾನ ತಬ್ಬಿದೆ
ಪೂರ್ಣಶಶಿ ಬಿಂಬ ಮೂಡಿದೆ
ಬಾ ಗೆಳತಿ
ಪ್ರಣಯ ಕಡಲೊಳು
ತನುವ ನೌಕೆ ಇಳಿಬಿಟ್ಟು
ಅನಂಗರತಿ ಜೋಡಿಯ ಅನಾದಿ ಜಾಡಲಿ
ಅನಂಗನಾ ರತಿ ನೀನಾಗಿ
ಉಬ್ಬು ತಗ್ಗುಗಳ
ಅನಾಮಿಕ ತಿರುವುಗಳ ತಾಕಿ
ತೇಲಿ ತೇಲಿ ಅಲ್ಲಲ್ಲಿ ಮುಳುಗಿ
ಈಜಿ ಈಜಿ
ರಸಕಡಲ ಸೀಳಿ
ಬ್ರಹ್ಮಾನಂದದ ದಾರಿ ಹುಡುಕುವ
ಉನ್ಮತ್ತ ಧ್ಯಾನದ ಉತ್ತುಂಗ ಸೇರುವ
ಬಾ ಗೆಳತಿ ಬೇಗ ಬಾ
ಎಲ್ಲ ಎಲ್ಲೆಯ ಮೀರಿ ಜಗದೆಲ್ಲ ಬೇಲಿಯ ದಾಟಿ
ಮನದ ದುಗುಡ ದುಮ್ಮಾನ ಬಿಗುಮಾನವೆಲ್ಲ
ಬೆವರಾಗಿ ಹನಿಯಲಿ
ಕಿಬ್ಬೊಟ್ಟೆಯಾಳದ ಕನವರಿಕೆಯೆಲ್ಲ
ಬಚ್ಚಿಟ್ಟ ಆಸೆಗಳೆಲ್ಲ ತಡೆಹಿಡಿದ ಕಳ್ಳಕನಸುಗಳೆಲ್ಲ
ಹಿರಿಕಿರಿಯ ಸುಖದ ಝೇಂಕಾರದಲೆಯಾಗಿ
ಸುತ್ತಲ ನೀರವ ಕದಡಲಿ
ರೋಮ ರೋಮದಿ ಮಿಂಚು ಚಲಿಸಿ
ನಡೆಯಲಿ ತನು ಮಥನ
ಬಾಳ ನಿಜ ಸುಧೆಗಾಗಿ
ಬಹಿರಂಗ ಅಂತರಂಗದೊಳು ಲೀನವಾಗಿ
ಜೀವ ರಸ ಚಿಮ್ಮಿ
ಸೃಷ್ಟಿ ಗುಟ್ಟು ಕತ್ತಲಲಿ ಬಯಲಾಗಲಿ
ಇರುಳು ಬೆಳಕಾಗಲಿ
11 comments:
sabhya poli kavana..
is it "ಅನಂಗನಾ" or "ಅನಂಗ ನಾ"??
pretty tough words to explain the most popular concept in the world, which is just a three-letter word known as 'sex'. now i got to know poetry is the simple process of complexifying simple concepts that are so simple that one doesn't even have to be a literate to understand them...
regs,
-R
@R
ಅದು 'ಅನಂಗ ನಾ .ಅದನ್ನೇ ನಾನು ಸೇರಿಸಿ ಅನಂಗನಾ ಎಂದು ಬರೆದದ್ದು..ಹೌದು ಸೆಕ್ಸ್ ತುಂಬಾ ಸಿಂಪಲ್..ಕವನ ರೂಪದಲ್ಲಿ ಅದು ಸ್ವಲ್ಪ ಸಂಕೀರ್ಣವಾಗಿದೆ ..ಹಾಗೆ ಮಾಡಲಿಕ್ಕೆ ಕಾರಣ ತೀರಾ ನೇರಾ ನೇರಾ ಹೇಳಿ ಬಿಡಬಾರದು,ಒಂದಿಷ್ಟು ಬೇರೆ ಬೇರೆ ಆಯಾಮದ ಅರ್ಥವೂ ಅದಕ್ಕೆ ಸಿಗಲಿ ಎಂದು.ಮತ್ತೆ 'ಅನಂಗ ನಾ 'ಎಂದು ಬಳಕೆ ಮಾಡಿದ್ದು ಆ ಶಬ್ದಕ್ಕೆ ಇರುವ ಒಂದು ರೀತಿಯ ನಾಜೂಕುತನ.ಅದು ಪದ್ಯಕ್ಕೆ
ಹೊಂದಿಕೊಳ್ಳುತ್ತೆ ಎಂಬ ಕಾರಣಕ್ಕೆ ಬಳಕೆ ಮಾಡಿದ್ದು.ಇದೊಂದು ಪ್ರಯೋಗವಷ್ಟೇ ..ಸರಳವಾಗಿ ಕೂಡ ಸಭ್ಯ ಪೋಲಿ ಕವನಗಳ ಸರಣಿಯಲ್ಲಿ ಬರೆದಿದ್ದೇನೆ.ನಿಮ್ಮ ವಿವರವಾದ ಪ್ರತಿಕ್ರಿಯೆ ನಾನು ಋಣಿ..:) :)
nice attempt :) i just want to remember k.v.thirumalesh line here
"kaama embudu ullagaddi
seere bichidare langa
langa bichidare chaddi"
@ ಗೌತಮ್ ಹೆಗಡೆ
super neat! :)
however, "ಒಂದಿಷ್ಟು ಬೇರೆ ಬೇರೆ ಆಯಾಮದ ಅರ್ಥವೂ ಅದಕ್ಕೆ ಸಿಗಲಿ ಎಂದು" ----> well, after reading the title, is it humanly possible for anyone to think or guess or impart any other dimension to this poem!??...including yourself?? ;-) lol
it is so difficult to differentiate b/w love & lust or for that matter, b/w decency & indecency. you've definitely won here! good attempt! much appreciated! :)
cheers!
-R
ಚಂದದ ಕವಿತೆ..
Prajavaani tilisitu nimma sabhya poli kavanada vilasa...naaku saalu eledukondu bandide nimma blogige...jagavu asabhya endu maremadida sangatigalu nimma kavanadalli artha ulisikondu paradarshaka daavani tottukondu jagamagiside..innashtu belagali nimma kavanagalu.
@ರೇವತಿ ಉಡುಪ .
ನಿಮ್ಮ ಕಾಮೆಂಟ್ ನೋಡುವ ತನಕ ನನಗೇ ಗೊತ್ತಿರಲಿಲ್ಲ ಪ್ರಜಾವಾಣಿಯಲ್ಲಿ ಬ್ಲಾಗ್ ಬಗ್ಗೆ ಬಂದ ವಿಷಯ...ನೀವು ಯಾರು ಎಂಬುದೇ ನನಗೇ ಗೊತ್ತಿಲ್ಲ. ಆದರೂ ನನ್ನ ಬ್ಲಾಗ್ ಅಂಗಳದ ತನಕ ಬಂದು ನಾಲ್ಕು ಮೆಚ್ಚುಗೆಯ ಮಾತನಾಡಿ ,ವಿಷಯ ತಿಳಿಸಿದ ನಿಮ್ಮ ಪ್ರೀತಿಗೆ , ಸೌಜನ್ಯಕ್ಕೆ ನಾನು ಋಣಿ :) :)
" ಸಭ್ಯ ಪೋಲಿ ಕವನ "ಚನ್ನಾಗಿದೆ ...ಕು.ವೆಂ ಪು ರವರ .. ಬಾ ಚಕೋರಿ ಚಂದ್ರಮಂಚಕೆ " ನೆನಪಾಯ್ತು
ಚೆನ್ನಾಗಿದೆ
Post a Comment