Sunday, November 7, 2010

ಹೊಸಾ ಬ್ಲಾಗು.ಅದಕ್ಕೊಂದು ಮುನ್ನುಡಿ.

ಹಳೇ ನಿಲ್ಧಾಣದಿಂದ ಹೊಸಾ ಪ್ರಯಾಣ ..

ಹೊಸಬನಾದ ನಾನು ಹಳೆಯದನ್ನೆಲ್ಲ ಗುಡಿಸಿ ಸಾರಿಸಿ ಬ್ಲಾಗ್ ಅಂಗಳವನ್ನೀಗ ಒಪ್ಪ ಮಾಡಿದ್ದೇನೆ. ಬ್ಲಾಗ್ ಮಾತ್ರವಲ್ಲ ನನ್ನನ್ನೂ ಕೂಡ. ಕನಸುಗಳನ್ನೇ ಚುಕ್ಕಿ ಮಾಡಿ ಒಂದೊಂದಾಗಿ ಇಡುತ್ತ ಬರುತ್ತೇನೆ. ಚುಕ್ಕಿಗಳನ್ನು ಸೇರಿಸಲು ಪ್ರೀತಿಯೆಂಬ ಸಾಲಿನ ನಂಟು. ಅಚ್ಚರಿ –ಬೆರಗುಗಳೇ ಬಣ್ಣ . ಮುಂದೆ ಅದು ರಂಗವಲ್ಲಿಯಾದರೆ ಖುಷಿ.ಇಲ್ಲದಿದ್ದರೆ ಹೇಗೂ ಮತ್ತೆ ಗುಡಿಸಿ ಒಪ್ಪ ಮಾಡಲು ಪೊರಕೆ ಇದ್ದೇ ಇದೆ.

ಅತ್ತಿಗೆಯ ನೆರಳಿನಲ್ಲಿ ಸೂರು ಕಟ್ಟಿಕೊಂಡವನು ನಾನು.ಒಂದೂವರೆ ವರುಷದ ಕೆಳಗೆ ಅನಾಮಿಕ ನಾನು.ಅಲೆಮಾರಿ ನಾನು.ಈಗ ಮತ್ತೆ ಅದೇ ಭಾವದಲ್ಲಿ ನಿಮ್ಮೆದುರು ಬರುತ್ತಿದ್ದೇನೆ. ಎಲ್ಲವನ್ನೂ ಹೊಸದಾಗಿ ಕಾಣಲು ಪ್ರಯತ್ನಿಸುತ್ತೇನೆ. ನನ್ನ ಕಣ್ಣ ಮುಂದಿರುವುದು ನಾನು ಮತ್ತು ನನ್ನ ನಾಳೆ ಗಳು ಮಾತ್ರ.

ಆಗ ನಮ್ಮ ‘ಗುಡ್ ನೈಟ್ ‘ಕವನದ ಹೀರೋ ಪ್ರಣಯರಾಜ ಪುಟ್ಟನಿದ್ದ.ಪುಟ್ಟನ ಜೊತೆಗೆ ಪುಟ್ಟಿ. ಅವರ ಪ್ರೀತಿ ನನ್ನ ಕವನವಾಗುತ್ತಿತ್ತು. ಉಳಿದ ಇತರೆ ಬರಹಗಳಿಗೆ ಮತ್ತದೇ ಪುಟ್ಟ ಪುಟ್ಟಿಯರ ಪ್ರೀತಿ ಸ್ಫೂರ್ತಿಯಾಗುತ್ತಿತ್ತು. ಆಗ ಎಲ್ಲವೂ ಸೊಗಸಿತ್ತು. ಈಗ ಮತ್ತೆ ಆ ದಿನಗಳೇ ಬರುವ ನಾಳೆಗಳಾಗಲಿ.

‘ಗುಡ್ ನೈಟ್ ಕವನ’. ‘ಆ ಒಂದು ದಿನದ ಡೈರಿ ‘, ‘ಜಗತ್ತಿಗೊಂದು ಪತ್ರ ‘ ,’ ಬಾಲವನ’ , ‘ಹಾಸ್ಟೆಲ್ ಚಿತ್ರಗಳು ‘ , ನಡುವೆ ಅಲ್ಲೊಂದು ಇಲ್ಲೊಂದು ಇತರೆ ಕವನಗಳು ; ಇವಿಷ್ಟು ನನ್ನ ಬ್ಲಾಗಿನ ಮೆನು ಪಟ್ಟಿ. ಪ್ರೀತಿ ಮತ್ತು ಖುಷಿ ಬ್ಲಾಗಿನ ಬೀಜಮಂತ್ರ.ಪ್ರೀತಿ ಮತ್ತು ಖುಷಿಯ ಆಚೆ ಉಳಿದ ಸಂಗತಿಗಳು ಏನೇ ಇದ್ದರೂ ಅವು ವರ್ಜ್ಯ . ಬರೆಯುವ ಕೈಗಳು ನನ್ನವು.ಆದರೆ ಬರಹ ನನ್ನೊಳಗಿನ ಅಲೆಮಾರಿಯದ್ದು. ಈ ಸೂತ್ರದಲ್ಲಿ ಹೊಸ ಬ್ಲಾಗು ಸಾಗುತ್ತೆ. ನನ್ನದೆಲ್ಲವನ್ನೂ ಬ್ಲಾಗ್ ಅಂಗಳದಲ್ಲಿ ಹರವಿಟ್ಟು ಕೂರುವುದಿಲ್ಲ. ನಾನಲ್ಲದ ನನ್ನನ್ನು ಮಾತ್ರ ಮೆರೆಸುತ್ತೇನೆ.

ಹೊಸತಾಗಿ ಶುರುವಾದ ಬ್ಲಾಗು ‘ಗುಡ್ ನೈಟ್ ‘ ಕವನದಿಂದಲೇ ಶುರುವಾಗಲಿ .

ಗುಡ್ ನೈಟ್ ಕವನ : ೧


ಜಗವೇ ಒಂದು ಮಗುವಾಗಿದೆ

ತಣ್ಣನೆ ಇರುಳ ಮಡಿಲ ತೊಟ್ಟಿಲಲಿ

ಬೀಸೋ ಗಾಳಿಯಲಿ ಅತ್ತಿತ್ತ ತೂಗಿ.

ರಾತ್ರಿಯ ಸೊಗಸೇ ಹಾಗೆ ಪುಟ್ಟಿ

ನಿನ್ನಂತೆ .ನಿನ್ನ ಒಲವಂತೆ.

ರಾತ್ರಿಯಲಿ ಬರುವ ಶಾಂತಿಯ ದಿವ್ಯ ಚುಂಬನಕೆ

ಅದೆಂಥ ಮಾಯೆಯ ಮುಸುಕು !

ಜಗವೆಲ್ಲ ಚಿತ್ರವಾಗಿ

ಜನರೆಲ್ಲ ಉಸಿರಿದ್ದೂ ಶವವಾಗಿ

ಯೋಗನಿದ್ರೆಯಲಿ

ತನುಮನ ಹಗುರಾಗೋ ಯೋಗ .

ಇರುಳಲ್ಲ ಇದು

ಮಹಾ ಮೌನರಾಗ ....

21 comments:

ಮಹೇಶ ಭಟ್ಟ said...

ನಿಮ್ಮ ಹೊಸಾ ಬ್ಲಾಗಿಗೆ ಶುಭಾಶಯಗಳು.

ಶರಶ್ಚಂದ್ರ ಕಲ್ಮನೆ said...

ಆಲ್ ದಿ ವೆರಿ ಬೆಸ್ಟ್ :)

Ittigecement said...

ಹೊಸ ಬ್ಲಾಗಿಗೆ ಜೈ ಹೋ... !!

ಗೌತಮ್ ಹೆಗಡೆ said...

ಮಹೇಶ್ ಭಟ್ ಅವರೆ ನಿಮಗೆ ಧನ್ಯವಾದ :) ನಿಮ್ಮ ಪ್ರೀತಿ ಹಾಗು ಬೆಂಬಲ ಹೀಗೇ ಇರಲಿ :)

ಗೌತಮ್ ಹೆಗಡೆ said...

@ ಶರಶ್ಚಂದ್ರ ಕಲ್ಮನೆ

ದೋಸ್ತಾ ಥ್ಯಾಂಕ್ಸ್ :)ಖುಷಿ ಆತು ನಿನ್ನ ವಿಷಸ್ ನೋಡಿ :)

ಗೌತಮ್ ಹೆಗಡೆ said...

ಪ್ರಕಾಶಣ್ಣ ಧನ್ಯವಾದ :) ಹಿಂಗೆ ಪ್ರೋತ್ಸಾಹ .ಬೆಂಬಲ ಇರ್ಲಿ ಯಾವಾಗೂ :)

ಖುಷಿ ಆತು :) ಥ್ಯಾಂಕ್ಸ್ ಇನೊಂದ್ಸಲ :)

ಮನಮುಕ್ತಾ said...

ಶುಭವಾಗಲಿ.

ಸುಧೇಶ್ ಶೆಟ್ಟಿ said...

!!!!

Ene maadi..nimma barahagaLu yaavaththinanthe sundharavaagiddare saaku :)

good night kavana chennagidhe :)

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಶುಭಾಶಯಗಳು.ಮತ್ತು ಅಭಿನ೦ದನೆಗಳು.

ಗೌತಮ್ ಹೆಗಡೆ said...

@ ಮನಮುಕ್ತಾ

ಮನಮುಕ್ತಾ ಅವರೆ ತುಂಬಾ ಧನ್ಯವಾದಗಳು :) ನಿಮ್ಮ ಬೆಂಬಲ ಹೀಗೇ ಇರಲಿ :)

ಗೌತಮ್ ಹೆಗಡೆ said...

@ಶಿವಶಂಕರ್ ಯಳವತ್ತಿ

ಶಿವಶಂಕರ್ ಸರ್ ನಿಮ್ಮ ಪ್ರೀತಿಗೆ ನಾನು ತುಂಬಾ ಆಭಾರಿ.ಕಳಕಳಿಯಿಂದ ಫೋನ್ ಮಾಡಿ ನನ್ನ ಕಷ್ಟ ಸುಖ ವಿಚಾರಿಸಿದ್ದಕ್ಕೆ ತಮಗೊಂದು ಪ್ರೀತಿಯಿಂದ ಧನ್ಯವಾದ .

ನಿಮ್ಮ ಬೆಂಬಲ ಹೀಗೇ ಇರಲಿ ಸರ್ :)

ಗೌತಮ್ ಹೆಗಡೆ said...

@ ಸುಧೇಶ್ ಜಿ

ಮೊದಲಿನಿಂದಲೂ ನನ್ನ ಜೊತೆಗಿದ್ದೀರಿ. ಪ್ರತಿ ತಿರುವಿನಲ್ಲೂ ನೀವು ತಪ್ಪದೆ ಕಾಣಿಸಿ ಕೊಳ್ಳುತ್ತೀರಿ. ನಿಮ್ಮ ಬೆಂಬಲಕ್ಕೆ ನನ್ನ ಕಡೆಯಿಂದ ಧನ್ಯವಾದಗಳು :)

ಖುಷಿಯಾಯ್ತು.:) ಥ್ಯಾಂಕ್ಸ್ :)

ಗೌತಮ್ ಹೆಗಡೆ said...

@ ಕೂಸು ಮುಲಿಯಾಳ

ಸರ್ ತಮಗೂ ಧನ್ಯವಾದಗಳು. ಹೀಗೇ ಬರುತ್ತೀರಿ .ಪ್ರೀತಿ ಹಾಗು ಬೆಂಬಲ ಹೀಗೇ ಇರಲಿ :)

ವಿ.ರಾ.ಹೆ. said...

ಶುಭವಾಗಲಿ. ;)

Sushrutha Dodderi said...

artha aaglilla.. ellide hosa blogu? link / URL enu?

ಗೌತಮ್ ಹೆಗಡೆ said...

@ ವಿಕಾಸಣ್ಣ ...

ಥ್ಯಾಂಕ್ಸ್ ಉ ವೆರಿ ವೆರಿ ಮಚ್ಚು ವಿಕಾಸಣ್ಣ :)

ನಿಮ್ ಬೆಂಬಲ ನಮಗೆ ಇದ್ದು.ಅದು ನಮಗೆ ಗೊತ್ತು. ಮತೊಂದ್ಸಲ ಥ್ಯಾಂಕ್ಸ್ ಉ ವೆರಿ ವೆರಿ ಮಚ್ಚು :)

ಗೌತಮ್ ಹೆಗಡೆ said...

@ ಸುಶ್ರುತಣ್ಣ ...

ಓ ಬ್ರದರು .ಹಳೆದೆ ಹೊಸ ಬ್ಲಾಗು. ಬಾಡಿ ಅದೇಯಾ. ಅಂಗಿ ಚಡ್ಡಿ ಹೊಸಾದು. ದೀಪಾವಳಿ ವಿಶೇಷ ಕೊಡುಗೆ. ಹಳೆದೆಲ್ಲ ಕ್ಲೀನ್ ಕಿಸ್ನಪ್ಪ ಮಾಡಿ ಹೊಸತಾಗಿ ಬ್ಲಾಗ್ ಶುರು :)

ನೀ ಶುಭಾಶಯನೇ ಹೇಳೇ.ಪ್ರಶ್ನೆ ಹಾಕಿ ಹೋದೆ.ಸೊ ನಿಂಗೆ ಸಣ್ಣ ಥ್ಯಾಂಕ್ಸ್ :)

ಮನಸಿನ ಮಾತುಗಳು said...

ತಮ್ಮಯ್ಯ,

ನೀನು ಹೊಸ ಬ್ಲಾಗ್ ಶುರು ಮಾಡಲು ಮುಂದಾಗಿದ್ದು ನನಗೆ ಖುಷಿ ಕೊಟ್ಟಿದೆ.


ಆದರೆ "ಹೊಸಬನಾದ ನಾನು ಹಳೆಯದನ್ನೆಲ್ಲ ಗುಡಿಸಿ ಸಾರಿಸಿ ಬ್ಲಾಗ್ ಅಂಗಳವನ್ನೀಗ ಒಪ್ಪ ಮಾಡಿದ್ದೇನೆ"...ಏನು ಈ ಮಾತಿನ ಅರ್ಥ ತಮ್ಮಯ್ಯ? ಇಷ್ಟು ದಿನ ನೀನು ಬರೆದಿದ್ದು ನಿನಗೇ ಕಸ ಅನಿಸಿತೇ ಗುಡಿಸಲು? ಹೀಗಾಗಲು ಕಾರಣ ಏನು? ಸುಮಾರಾಗಿ ಒಂದು ವರ್ಷಕ್ಕಿಂತ ಮೇಲಾಯ್ತು ನಿನ್ನ ಬ್ಲಾಗನ್ನು ನಾನು ಓದುತ್ತಾ.ಬರೆದ ಎಲ್ಲ ಬರಹಗಳು ಚೆನ್ನಾಗೆ ಇದ್ದವು. ಈಗ ಇದ್ದಕ್ಕಿದ್ದಂತೆ ಅವನ್ನೆಲ್ಲ ಗುಡಿಸಿದೆ ಅಂದರೆ?ಹಾಗಾದರೆ ಬರೆಯುವಾಗ ನಿನಗೆ ಅವುಗಳ ಮೇಲೆ ಪ್ರೀತಿ ಇರಲಿಲ್ಲವೆ?

ಈಗ ಎಲ್ಲ ಗುಡಿಸಿದ್ದೀಯ ,ಇರಲಿ. ಇನ್ನು ಮುಂದೆ ಹಾಗಾಗದಿರಲಿ. ನಿನ್ನ ಬರಹಗಳು, ಕವನಗಳು ನಿಜಕ್ಕೂ ಚೆನ್ನಾಗಿವೆ.ಅದರಲ್ಲೂ "ಗುಡ್ ನೈಟ್ "ಕವನಗಳು ನಿನ್ನವೇ . So continue writing ...:)
ಶ್ರಾವಣ ಮಳೆ ಸುರಿದಷ್ಟೂ ನಿನ್ನ ಬ್ಲಾಗ್ ಅಂಗಳ ಗಟ್ಟಿಯಾಗಲಿ. ಶುಭವಾಗಲಿ.

ಪ್ರೀತಿಯಿಂದ,
ದಿವ್ಯಕ್ಕ..:-)

ಗೌತಮ್ ಹೆಗಡೆ said...

@ದಿವ್ಯಕ್ಕ ..

ಹಳೇ ಪೋಸ್ಟ್ ಲಿ ಪ್ರೀತಿ ಇಟ್ಟು.ಇಲ್ಲೇ ಹೇಳಲ್ಲ.ಬಟ್ ಅದರ ಜೊತೆ ಕೆಲವಷ್ಟು ಅನಾವಶ್ಯಕ ವಿಷಯಗಳೂ ಇತ್ತು.ಸೊ ಎಲ್ಲ ಕ್ಲೀನ ಮಾಡಿ ಹೊಸತಾಗಿ ಶೃ ಮಾಡಿದ್ದು :)

ಥ್ಯಾಂಕ್ಸ್ ದಿವ್ಯಕ್ಕ.ಖುಶ್ಯಾತೆ :)

Unknown said...

ಆಲ್ ದಿ ವೆರಿ ಬೆಸ್ಟ್ :)

Unknown said...

ಆಲ್ ದಿ ವೆರಿ ಬೆಸ್ಟ್ :)