ಕನಸು ಖಾಲಿಯಾಗಿ
ಮನಸು ಬಾಳ್ಗೆ ಬೆನ್ನುಹಾಕಿ
ಖಿನ್ನರಾಗಿ ಕುಳಿತಾಗ
ಕೆಲವರಿಗೆ
ಸಾವೊಂದು ಅಮೃತ
ದಿವ್ಯಶಾಂತಿಯನು ತರುವ ಶಾಂತಿದೂತ.
ಅಷ್ಟಕ್ಕೂ,
ಸತ್ತವರ ಶಾಂತಿಯ ತಾಕಿ
ಮರಳಿ ಹೇಳಬಂದವರಾರು?
ತುಂಬಿಕೊಳಲು ಉಸಿರೇ ಇಲ್ಲದಾಗ
ಸಾವೊಂದು ಶಾಂತಿ ಎಂದವರು
ಹುಂಬರಲ್ಲದೆ ಇನ್ಯಾರು?
ಶೀತಲ ಕೊರಡಿನೊಳಗೆ
ಮನೆಯವರ,
ತನ್ನವರೆಂದುಕೊಂಡವರ
ಬಿಟ್ಟು ಬಂದುದಕ್ಕೆ
ಅದೇನು ವಿಷಾದ,
ಅದೆಷ್ಟು ಚಡಪಡಿಕೆ, ಯಾತನೆ
ಹಿಮಗಟ್ಟಿದೆಯೋ?
ಸಾಧಿಸಲಾಗದ ಹಠ, ಹಗೆ, ಕನಸು
ಎಲ್ಲಿ ಗಂಟಾಗಿ ಕುಳಿತಿದೆಯೋ!
ಸಾವು ನನ್ನಂತೆಯೂ ಅಲ್ಲದೆ,
ಅವರಂತೆಯೂ ಇಲ್ಲದೆ,
ಸಾವು ಸತ್ತವರಂತೆ ಇದೆಯೇ?
ಸತ್ತಲ್ಲಿ ನಿರ್ಲಿಪ್ತವೇ?
ಅಥವಾ...
Saturday, July 11, 2009
Subscribe to:
Post Comments (Atom)
4 comments:
ಗೌತಮ...
ತುಂಬ ಹಿಂದೆ ನಾನೂ ಸಹ ಇಂಥದೇ ಅರ್ಥ ಕೊಡುವ ಸಾಲುಗಳನ್ನು ಬರೆದಿದ್ದೆ.
http://www.shantalabhandi.com/2008_05_01_archive.html#8533316508202662110
ಪ್ರಶ್ನೆ ಕೇಳಿಕೊಂಡಷ್ಟೇ ಬಂತು, ಉತ್ತರ ಸಿಗುವುದೇ ಇಲ್ಲ.
ಗೌತಮ,
ಕವನ ಚೆನ್ನಾಗಿದೆ. ಆದರೆ ಸಾವಿನ ಕವಿತೆಗಳೇಕೆ ನಿಮ್ಮಿಂದ?
ಗೌತಮ,
ಸಾವನ್ನು ಯಾವುದೇ ರೂಪದಲ್ಲಿ ಕಂಡವರಿಂದಲೂ ಸಾವಿನ ಕವಿತೆಗಳು ಬರಬಹುದು, ನಿಜ. ಆದರೆ, ಈ ಪ್ರಶ್ನೆಗಳು ನಮ್ಮನಮ್ಮಲ್ಲಿ ಕೇಳಿಕೊಳ್ಳಬಲ್ಲೆವಷ್ಟೇ. ಉತ್ತರವನ್ನು ನಾನೂ ಹುಡುಕುತ್ತಿದ್ದೇನೆ. ನಿನ್ನ ಪ್ರಶ್ನೆಗಳಿಗಿರುವ ಗಾಢತೆ ತಟ್ಟಿದೆ ಎಂದಷ್ಟೇ ಹಳಬಲ್ಲೆ.
Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net
Post a Comment