ಹೋಮ ಹವನ, ಪೂಜೆ ಪುನಸ್ಕಾರ,
ಜಪತಪ, ಮಂತ್ರತಂತ್ರ
ನೂರಿವೆ ಜಗದಿ
ಒಳಹುಳುಕ ಮುಚ್ಚಿ ಮುಕ್ತಿಗೇರಲು
ಇಲ್ಲಿ ಚೆಂದಾಗಿ ಬಾಳದೆ
ಮತ್ತೆಲ್ಲೋ ಮೇಲೆ
ಸೊಗದ ಬಾಳರಸೋ
ಯಾಕಿಂತ ಕಸರತ್ತು?
ಚೆಂದನೆ ಮನ ಹರವಿಕೊಂಡು
ಅಲ್ಲಿ ಸುತ್ತಲ ಜಗವ
ಬರಮಾಡಿಕೊಂಡು
ಎಲ್ಲರಲ್ಲೂ ನಮ್ಮ ಕಂಡು
ನಾವು ನಾವಾಗಿ ಸಾಗೋಣ ನಿರ್ಲಿಪ್ತರಾಗಿ
ಕಾಲದೊಡನೆ
ಇಲ್ಲೇ ಎಲ್ಲವಿದೆ
ನಾಕ, ಮುಕ್ತಿ,
ಮತ್ತೆ
ಅವನೆಲ್ಲ ಮೀರಿದ್ದು...
Tuesday, May 19, 2009
Subscribe to:
Post Comments (Atom)
5 comments:
ಎಂಥ ಚೆಂದದ ಕಿವಿಮಾತು. ಪುಟ್ಟನೆಯ ಮನದೊಳಗಿನ ಪ್ರಬುದ್ಧ ಯೋಚನೆಗಳನು ಓದುವಾಗ ಏನೋ ತೃಪ್ತಿ. ಬರೆಯುತ್ತ ಹೋಗು. ಓದುತ್ತಲಿರುತ್ತೇನೆ.
tumbaa chennaagide....
iShTavayitu....
wonderful, tumba mana muttuvantide
ಉತ್ತಮ ಕವನಗಳನ್ನು ಬರೆಯುವ ಸಾಮರ್ಥ್ಯ ನಿಮಗಿದೆ. ಹೃದಯದಲ್ಲಿ ನೂರೆಂಟು ಭಾವನೆಗಳಿವೆ. ನಿಮ್ಮಿಂದ ಬಹಳಷ್ಟನ್ನು
ನಾವು ಅಪೇಕ್ಷಿಸುತ್ತೇವೆ.
ಜಿ.ಎಸ್. ಶಿವರುದ್ರಪ್ಪನವರ ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ.......... ನೆನಪಾಯ್ತು, ಚೆನ್ನಾಗಿ ಬರೆದಿದ್ದೀಯಾ ಸಾಗರ್, ಮನಭಾವನೆಗಳ ಜೊತೆ ಗುದ್ದಾಡುವಾಗ ನಮ್ಮೊಳಗಿನ ನೋವು, ನಮ್ಮಂತೆ ಬೇರೆಯವರಿಗೂ ತಿಳಿಯಲಿ ಎಂಬ ಭಾವ...........
ಅರವಿಂದ್
Post a Comment