ಹಾದಿಬದಿಯಲಿ
ಮರದ ನೆರಳಡಿಯಲಿ
ನೆಮ್ಮದಿಯಲಿ ಮಲಗಿದ್ದ
ತಿರುಕ ಭೈರಾಗಿ
ಬಟ್ಟೆಗಳಂತಿದ್ದ ಬಟ್ಟೆಗಳ ಒಂದು ಗಂಟು
ನಪ್ಪುನಪ್ಪಿನದೊಂದು ತಾಟು
ಅವನ ಬಳಿ ಸೊಂಪಾಗಿದ್ದುದು
ಅವನ ಅಲೆಯಲೆಯ ಬಿಳಿಕರಿಯ
ಗಡ್ಡವೊಂದೇ
ದಂಡಿಯಾಗಿ ಯಾರ ಹಂಗಿಲ್ಲದೆ
ಹೀರಲು ಇದ್ದದ್ದು ಗಾಳಿಯೊಂದೇ
ಬಾಳೊಂದೇ ಬಿಡದ ನಂಟಾಗಿ
ಬದುಕೋ ಹಂಬಲವೇ ಒಲವಾಗಿ
ಅವಗಿಲ್ಲ bಅವನದೆಂಬ ದೈವ,
ಕುಲ, ಗೋತ್ರ, ಧರ್ಮ,
ಅದಾವುದೂ ಹೊಟ್ಟೆಹೊರೆಯದೆಂದು
ಅವಗೆ ಗೊತ್ತು
ಹೀಗೆ ಅಲೆಮಾರಿ ಅನಿಕೇತನನಾಗಿ
ಜಗವೆಂಬ ವಾಸ್ತವದ ಬೋಧಿವೃಕ್ಷದಡಿ
ಬುದ್ಧನಾದವನು ಆತ
ಅವಗೆ ಹುಟ್ಟಿನ ಹೆಮ್ಮೆಯಿಲ್ಲ
ಸಾಯ್ವ ಭಯವಿಲ್ಲ
ಯಾವುದಕ್ಕೂ ನಿಲುಕದ
ಯಾವುದಕ್ಕೂ ಅಂಟದ
ನಿಜ ವಿಶ್ವಮಾನವನೀತ
Subscribe to:
Post Comments (Atom)
4 comments:
ತುಂಬಾ ಚೆನ್ನಾಗಿದೆ
hi,
chennagide kavithe :)
Namma jeevanakinta ivanade lesu anisuthe.....
ತುಂಬಾ ಚೆನ್ನಾಗ್ ಬರೇತೀರ
-ಧರಿತ್ರಿ
ellarigu dhanyavaada.
Post a Comment