Sunday, April 26, 2009

ಅಮ್ಮ

ಚೆಂದನೆಯ ಮನದವರೆಲ್ಲ ಮೇಲೆಹೋದಮೇಲೆ
ಮೇಲಾಗಸದಿ ತಾರೆಯಾಗಿ ಮಿನುಗುವರು ಎಂದು

ಮೇ...ಲೆ
ಕೈ ಮಾಡಿ ತೋರಿಸಿ
ಮಮತೆಯಲಿ ತುತ್ತಿಡುತ್ತ
ರಮಿಸಿ ಲಾಲಿ ಹಾಡುತ್ತಿದ್ದ
ಎನ್ನಮ್ಮಾ...

ಎನ್ನ ಕಂಬನಿ ತುಂಬಿದ
ಅರಸುವ ಕಂಗಳೆದುರು
ಅನಾಮಿಕ ತಾರೆಯಾಗಿ
ವರುಷಗಳಾದವು ಹಲವು

ಹೇಗೆ ಮನಸಾಯಿತೋ
ಅದೆಂತು ಅವಸರವಿತ್ತೋ
ಕಾಲನೆಣಿಕೆಯೇ ಹಾಗಿತ್ತೋ

ಅಮ್ಮ ಹೋದಳು

ಧಾವಂತಕ್ಕೆ ಬಿದ್ದವಳಂತೆ
ಮರಳಿಬಾರದೂರಿಗೆ
ತಾ ಮಾತ್ರ ನೆಮ್ಮದಿಯನರಸಿ;
ಇರಿವ ನೆನಪಾಗಿ
ಗಂಟಲಾಳದಿ ಬಿಗಿದ ನೋವ ಗಂಟಾಗಿ
ಜೀರ್ಣವೇ ಆಗದ ವಾಸ್ತವವಾಗಿ
ಅಲೆಯಲೆಯಾಗಿ ಉಮ್ಮಳಿಸುವ
ಕಹಿನೆನಪಾಗಿ
ಮತ್ತು
ಅನಾಥಭಾವದ ಬಿಕ್ಕಾಗಿ................

4 comments:

ಶಾಂತಲಾ ಭಂಡಿ said...

"ಜೀರ್ಣವೇ ಆಗದ ವಾಸ್ತವವಾಗಿ
ಅಲೆಯಲೆಯಾಗಿ ಉಮ್ಮಳಿಸುವ
ಕಹಿನೆನಪಾಗಿ
ಮತ್ತು
ಅನಾಥಭಾವದ ಬಿಕ್ಕಾಗಿ................"


ಸಾಲುಗಳಿಗೆ ಧನ್ಯವಾದ.

ಗೌತಮ್ ಹೆಗಡೆ said...
This post has been removed by the author.
ಸುಪ್ತದೀಪ್ತಿ suptadeepti said...

ಕರಗಲಾರದ ಎರಡು ಹನಿ
ಮುತ್ತು ಮುತ್ತುಗಳಾಗಿ...

ಶಿರಬಾಗಿದ ನಮನಗಳಾಗಿ!

Anonymous said...

ನಾವು ತುಂಬಾ ಹಚ್ಚಿಕೊಂಡಿರುವವರು ಹೋದಾಗ ಅದನ್ನು ಸಹಿಸುವುದು.....ಘೋರ...
ಆದರೆ ಹೀಗೆ ಯೋಚಿಸಿ ನೋಡಿ...
ಅಮ್ಮನ ನೆನಪಾಗಿ ಗಂಟಲು ಬಿಗಿದು ಬಂದಾಗಲೆಲ್ಲಾ
ನೀವು ಅವರೊಂದಿಗೆ ಕಳೇದ ಸುಂದರ ದಿನಗಳ ನೆನಪು ಮಾಡಿಕೊಳ್ಳಿ ಅವರು ಕೇವಲ ನಿಮಗೆ ನೋವು ಕೊಟ್ಟರೆ? ಇಲ್ಲ ಅಲ್ವಾ....ನೀವು ಅವರನ್ನು ನೆನೆಸಿ ಕೊಂಡಾಗಲೆಲ್ಲಾ ನೋವು ಪಟ್ಟರೆ ಮೇಲಿರುವ ಅವರಿಗೆ ಇಷ್ಟ ಆಗುತ್ತಾ? ಇಲ್ಲ
ಅವರೊಡನೆ ಕಳೆದ ದಿನ ನಿಮಗೆ ಅನಂತ ನಲಿವೂ ಕೊಟ್ಟಿದೆ ಆನಲಿವನ್ನು ನೆನೆಸಿಕೊಳ್ಳಿ ಅಂಥಾ ಅಮ್ಮ ನಿಮಗೆ ಸಿಕ್ಕ್ರಲ್ಲಾ ಅಂಥಾ ನಿಮ್ಮ ಅದ್ರ್‍ಇಷ್ಟಕ್ಕೆ ಖುಷಿ ಪಡಿ...ಹೇಳುವಷ್ಟು ಸುಲಭವಲ್ಲ ಅದು.. ಗೊತ್ತು
ನಿಧಾನಕ್ಕೆ ಮನಸ್ಸಿಗೆ ಅದನ್ನು ಕಲಿಸಿ